South Indian Bank : ಸೌತ್ ಇಂಡಿಯನ್ ಬ್ಯಾಂಕ್ ಸ್ಥಿರ ಠೇವಣಿ (ಫಿಕ್ಸ್‌ಡ್ ಡಿಪಾಸಿಟ್) ವ್ಯವಸ್ಥೆಗೆ ನೂತನ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಮೂಲಕ ಸುಲಭವಾಗಿ ಹಾಗೂ ತ್ವರಿತವಾಗಿ ಠೇವಣಿದಾರರು ಎಸ್‌ಐಬಿ (ಸೌತ್ ಇಂಡಿಯನ್ ಬ್ಯಾಂಕ್)ನಲ್ಲಿ ಸ್ಥಿರ ಠೇವಣಿ ಪಡೆಯಬಹುದಾಗಿದೆ. ಎಸ್‌ಐಬಿ ಕೇರಳ ಮೂಲದ ಖಾಸಗಿ ಬ್ಯಾಂಕ್ ಸಂಸ್ಥೆಯಾಗಿದೆ.
ಯಾವುದೇ ಬ್ಯಾಂಕ್‌ನಲ್ಲಿರುವ ಹಣವನ್ನು ವರ್ಗಾಯಿಸಿ ಠೇವಣಿದಾರರು ಯುಪಿಐ ಸೇವೆ ಹಾಗೂ ಸೂಕ್ತ ಕೆವೈಸಿ ವ್ಯವಸ್ಥೆ ಮೂಲಕ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಇನ್ನು ಠೇವಣಿ ಇರಿಸಬಹುದಾಗಿದೆ. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯ ಸಾಧ್ಯತೆಯನ್ನು ವಿಸ್ತರಿಸಿದೆ.
ಯೋಜನೆಯ ಮುಖ್ಯಾಂಶಗಳು
* ಗ್ರಾಹಕರು ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರದಿದ್ದರೂ ‘ಸ್ಥಿರ ಠೇವಣಿ’ ಇರಿಸಬಹುದಾಗಿದೆ
* ಸಂಪೂರ್ಣ ಠೇವಣಿ ಸೌಲಭ್ಯ ಪೇಪರ್ ರಹಿತವಾಗಿದ್ದು, ಡಿಜಿಟಲ್ ವ್ಯವಸ್ಥೆ ಮೂಲಕ 5 ನಿಮಿಷದಲ್ಲಿ ಯೋಜನೆಯನ್ನುಪಡೆಯಬಹುದಾಗಿದೆ
* ಗ್ರಾಹಕರು ಯುಪಿಐ ಮೂಲಕ ಎಫ್‌ಡಿಗೆ ಹಣ ವರ್ಗಾಯಿಸಬಹುದು
* ಸ್ಥಿರ ಠೇವಣಿ ಸೌಲಭ್ಯ ಪಡೆಯಲು ಆಧಾರ್ ಮಾಹಿತಿ ಹಾಗೂ ಪಾನ್ ಕಾರ್ಡ್ ಮಾಹಿತಿ ಮಾತ್ರ ಸಾಕು
* ಎಫ್‌ಡಿ ಖಾತೆಯನ್ನು ಯಾವುದೇ ಸಮಯದಲ್ಲಿ ತೆರೆಯಬಹುದು. 24/7 ಸಮಯ ಈ ಸೇವೆ ಲಭ್ಯವಿರಲಿದೆ
* ಸ್ಪರ್ಧಾತ್ಮಕ ಬಡ್ಡಿ ದರ ಹಾಗೂ ಅವಧಿಗೂ ಮುನ್ನ ಹಣ ಹಿಂಪಡೆಯುವ ಸೌಲಭ್ಯ
* ಸ್ಥಿರ ಠೇವಣಿ (ಎಫ್‌ಡಿ) ಆರಂಭಿಕ ಮೊತ್ತ ರು.1000 ಇದ್ದು ಸಾಕಷ್ಟು ಜನರಿಗೆ ಇದು ಅನುಕೂಲಕರ ಯೋಜನೆಯಾಗಿದೆ.
* ಠೇವಣಿ 5 ಲಕ್ಷದವರೆಗೆ ಡಿಐಸಿಜಿಸಿ ವಿಮೆಯ ಭದ್ರತೆ ಹೊಂದಿದ್ದು , ಠೇವಣಿದಾರರಿಗೆ ಉತ್ತಮ ಭದ್ರತೆ ನೀಡುತ್ತದೆ.
