

ಬೆಂಗಳೂರು: ಭಾರತೀಯ ಸ್ಪಿನ್ ಬೌಲರ್‌ಗಳಿಗೇ ಅವರೇ ಸ್ಫೂರ್ತಿ. ಸ್ಪಿನ್ ಬೌಲಿಂಗ್ ಎಂದರೆ ಒಂದು ಕಲೆ ಎಂದು ವಿಶ್ವ ಕ್ರಿಕೆಟ್ ವಲಯದಲ್ಲಿ ನಿರೂಪಿಸಿದವರು. ಕ್ರಿಕೆಟಿಗನಾದರೂ ಎದುರಾಳಿ ಬ್ಯಾಟ್ಸ್‌ಮನ್‌ಅನ್ನು ಕಟ್ಟಿ ಹಾಕುವುದರಲ್ಲಿ ಚೆಸ್ ಆಟಗಾರನಷ್ಟೇ ಮಾಂತ್ರಿಕ ಎರ‌್ರಪ್ಪಳ್ಳಿ ಅನಂತರಾವ್ ಶ್ರೀನಿವಾಸ್ ಪ್ರಸನ್ನ (ಇಎಎಸ್ ಪ್ರಸನ್ನ). 60, 70ರ ದಶಕದಲ್ಲಿ ರಾಷ್ಟ್ರೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದ ಕನ್ನಡಿಗ ಪ್ರಸನ್ನ ಶುಕ್ರವಾರ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಡೀ ಕ್ರಿಕೆಟ್ ಲೋಕವೇ ದಿಗ್ಗಜ ಬೌಲರ್‌ಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದೆ. ಈ ಮಾಂತ್ರಿಕ ಪದವಿಗಾಗಿ ಕ್ರಿಕೆಟ್‌ನಿಂದಲೇ ದೂರ ಉಳಿದಿದ್ದು ಅಚ್ಚರಿಯ ವಿಷಯ.
ವೃತ್ತಿಪರ ಆಟಗಾರರು ಪದವಿಗಿಂತ ಕ್ರಿಕೆಟ್ ಮುಖ್ಯ ಎನ್ನುವುದೇ ಜಾಸ್ತಿ. ಅಂಥ ವಿಷಯದಲ್ಲಿ ಪ್ರಸನ್ನ ವಿಶೇಷವಾಗಿ ಕಾಣುತ್ತಾರೆ. 1961ರಲ್ಲಿ ಮದ್ರಾಸ್‌ನಲ್ಲಿ (ಇಂದಿನ ಚೆನ್ನೈ) ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸನ್ನ ಬಳಿಕ 2ನೇ ಟೆಸ್ಟ್ ಆಡಲು ತೆಗೆದುಕೊಂಡಿದ್ದು ಬರೋಬ್ಬರಿ 5 ವರ್ಷ. ಇದಕ್ಕೆ ಕಾರಣ ಪದವಿ! ಪದವಿ ಪಡೆಯುವುದಕ್ಕಾಗಿಯೇ ಕರ್ನಾಟಕದ ಆಟಗಾರ ಪ್ರಸನ್ನ ಕ್ರಿಕೆಟ್‌ನಿಂದ ದೂರ ಉಳಿದ್ದರು ಎಂಬುದು ಅಚ್ಚರಿಯ ಸಂಗತಿ. 1967ರಲ್ಲಿ ಕ್ರಿಕೆಟ್‌ಗೆ ವಾಪಸಾದ ಪ್ರಸನ್ನ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿಯ ನೀಲ ಕಂಗಳ ಹುಡುಗನಾಗಿ ಮೆರೆದಾಡಿದರು. ಆ್ ಸ್ಪಿನ್ನರ್ ಆಗಿ ಗುರುತಿಸಿಕೊಂಡ ಪ್ರಸನ್ನ ಭಾರತದ ಪರ ಇದುವರೆಗೆ ಆಡಿದ 49 ಟೆಸ್ಟ್ ಪಂದ್ಯಗಳಲ್ಲಿ 189 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ನನ್ನ ಬಯೋಪಿಕ್ ನೋಡಿ ಮಹಿಳೆಯರೂ ಬ್ಯಾಟ್ ಹಿಡಿಯಲಿ!
ರಾಜ್ಯಕ್ಕೆ ಮೊದಲ ರಣಜಿ ಗೆದ್ದುಕೊಟ್ಟ ನಾಯಕ
ಭಾರತದಲ್ಲಿ ಕ್ರಿಕೆಟ್ ಹುಟ್ಟಿನಿಂದಲೂ ಪಶ್ಚಿಮ ಪ್ರಾಂತ್ಯದವರದ್ದೇ ಪ್ರಾಬಲ್ಯ. ಅದರಲ್ಲೂ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಬಾಂಬೆ (ಇಂದಿನ ಮುಂಬೈ) ಸತತ 15 ಬಾರಿ ಚಾಂಪಿಯನ್ ಆಗಿದ್ದಾಗ ಇದಕ್ಕೆ ತಡೆ ನೀಡಿದ್ದು ಇದೇ ಪ್ರಸನ್ನ ಸಾರಥ್ಯದ ಕರ್ನಾಟಕ ತಂಡ. 1973-74ರಲ್ಲಿ ಕನ್ನಡಿಗರು ಚೊಚ್ಚಲ ಬಾರಿಗೆ ಪ್ರತಿಷ್ಠಿತ ಟ್ರೋಫಿ ಎತ್ತಿ ಹಿಡಿದರು. ಇದು ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಬದಲಾವಣೆಗೂ ನಾಂದಿ ಹಾಡಿತು. ಪಾಕ್ ಪ್ರವಾಸದ ಬಳಿಕ 1978ರಲ್ಲಿ ವೃತ್ತಿಪರ ಕ್ರಿಕೆಟ್‌ಗೆ ಪ್ರಸನ್ನ ವಿದಾಯ ಹೇಳಿದರು. ಬಳಿಕ ಕ್ರಿಕೆಟ್‌ನಿಂದ ಬಹುತೇಕ ದೂರ ಉಳಿದ ಪ್ರಸನ್ನ, 2007ರಲ್ಲಿ ಬಿಸಿಸಿಐ ವಿರುದ್ಧ ಸೆಡ್ಡು ಹೊಡೆದು ಆರಂಭಗೊಂಡ ಕಪಿಲ್ ದೇವ್ ನೇತೃತ್ವದ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ (ಐಸಿಎಲ್) ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಿಸಿಸಿಐಗೆ ವಾಪಸಾದರು.
ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ
ಸಮಕಾಲೀನ ಹಾಗೂ ಹಾಲಿ-ಮಾಜಿ ಕ್ರಿಕೆಟಿಗರು ಸೇರಿದಂತೆ ಇತರ ಕ್ಷೇತ್ರದ ಮಂದಿಯೂ ಪ್ರಸನ್ನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮದೇ ವ್ಯಾಖ್ಯಾನದಲ್ಲಿ ಹಿರಿಯ ಜೀವವನ್ನು ಅಭಿನಂದಿಸಿದ್ದಾರೆ. ಅವರ ಮಾಜಿ ಸಹ-ಆಟಗಾರರೂ ಆಗಿರುವ ಬ್ಯಾಟಿಂಗ್ ದಿಗ್ಗಜ ಜಿಆರ್ ವಿಶ್ವನಾಥ್, ಪ್ರಸನ್ನ ಅವರಷ್ಟು ಶ್ರೇಷ್ಠರಾದ ಆ್ ಸ್ಪಿನ್ನರ್ ಅನ್ನು ತಾನು ಇದುವರೆಗೂ ನೋಡಿಲ್ಲ ಎಂದಿದ್ದಾರೆ.