ಸ್ಯಾಂಡಲ್ವುಡ್ನಲ್ಲಿ ಇಲ್ಲಿಯವರೆಗೂ ಡ್ರಗ್ ಜಾಲದ ಬಗ್ಗೆ ಕೇಳಿಲ್ಲ. ಆದರೆ ಬಾಲಿವುಡ್ನಲ್ಲಿ ಈ ರೀತಿ ಡ್ರಗ್ ಜಾಲ ಇದೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೆ. ಸತತವಾಗಿ 48 ಗಂಟೆ ಶೂಟಿಂಗ್ನಲ್ಲಿದ್ದರೆ, ಅದೇ ಚಾಮ್ರ್ ಉಳಿಸಿಕೊಳ್ಳಲು ಡ್ರಗ್ ಸೇವಿಸುತ್ತಾರೆ ಎಂಬುದನ್ನು ಕೇಳಿದ್ದೆ. ಅದೇ ರೀತಿ ಕಾಲಿವುಡ್ನಲ್ಲಿಯೂ ಒಂದು ಪ್ರಕರಣ ನನ್ನ ಕಿವಿಗೆ ಬಿದ್ದಿತ್ತು. ಇದೀಗ ಸ್ಯಾಂಡಲ್ವುಡ್ ಹೆಸರೂ ತಳುಕು ಹಾಕಿಕೊಂಡಿದೆ. ಆದರೆ, ಈವರೆಗೆ ನಾನು ಸಾಕಷ್ಟು ಪಾರ್ಟಿಗಳಿಗೆ ಹೋಗಿದ್ದೇನೆ. ನಾನೇ ಪಾರ್ಟಿಗಳನ್ನು ಆಯೋಜಿಸಿದ್ದೇನೆ. ಡ್ರಗ್ ಬಗ್ಗೆ ಒಂದೇ ಒಂದು ಸಣ್ಣ ಸುಳಿವಾದರೂ ನನಗೆ ಸಿಕ್ಕಿರಬೇಕಿತ್ತು. ಬೇರೆಯವರು ಮಾಡಿರುವ ಕೃತ್ಯಕ್ಕೆ ಸ್ಯಾಂಡಲ್ವುಡ್ ಲಿಂಕ್ಸ್ ಕೊಟ್ಟಿದ್ದಾರೆ. ನಿಜಕ್ಕೂ ಇದು ಭಯಹುಟ್ಟಿಸುವಂಥ ಸುದ್ದಿ.
| ಭುವನ್ ಪೊನ್ನಣ್ಣ, ನಟ