ಕಲಬುರಗಿಯಿಂದ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ನಟ ದುನಿಯಾ ವಿಜಯ್​!

Duniya Vijay
Published on

ಆನೇಕಲ್​: ಅಭಿಮಾನಿಗೆ ಸನ್ಮಾನ ಮಾಡಿ, ಕಾಲಿಗೆ ನಮಸ್ಕಾರ ಮಾಡುವ ಮೂಲಕ ವರನಟ ಡಾ. ರಾಜ್​ಕುಮಾರ್​ ಹೇಳಿದ ಅಭಿಮಾನಿಗಳೇ ದೇವರು ಎಂಬ ಮಾತನ್ನು ನಟ ದುನಿಯಾ ನೆನಪಿಸಿದ್ದಾರೆ.

ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ವೇಳೆ ಅಭಿಮಾನಿಗೆ ಸನ್ಮಾನ ಮಾಡಿದ ದುನಿಯಾ ವಿಜಯ್​, ಕಾಲಿಗೆ ನಮಸ್ಕಾರ ಸಹ ಮಾಡಿದರು.

ದುನಿಯಾ ವಿಜಿ ಹುಟ್ಟುಹಬ್ಬಕ್ಕೆಂದು ಸಿದ್ದು ಸ್ವಾಮಿ ಹೆಸರಿನ ಅಭಿಮಾನಿ ಸುಮಾರು 600 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ನೆಚ್ಚಿನ ನಟನನ್ನು ಕಾಣಲು ಕಲಬುರಗಿಯಿಂದ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಗೆ ನಡೆದು ಬಂದಿದ್ದಾರೆ.

ಪಾದೆಯಾತ್ರೆಯನ್ನು ನಿಲ್ಲಿಸಿ ನೇರವಾಗಿ ಬರುವಂತೆ ದುನಿಯಾ ವಿಜಯ್​ ತಿಳಿಸಿದ್ದರು. ಇಲ್ಲ ನಾನು ನಡೆದುಕೊಂಡೆ ಬರುತ್ತೇನೆ ಎಂದು ಕಾಲ್ನಡಿಗೆ ಮೂಲಕವೇ ಬಂದು ದುನಿಯಾ ವಿಜಯ್​ ಅವರನ್ನು ಸ್ವಾಮಿ ಭೇಟಿಯಾಗಿದ್ದಾರೆ.

ಪಾದಯಾತ್ರೆ ಮಾಡಿದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ನಮಸ್ಕಾರ ಮಾಡಿದ ದುನಿಯಾ ವಿಜಯ್​, ಇನ್ನು ಮುಂದೆ ಈ ರೀತಿ ಪಾದಯಾತ್ರೆ ಮಾಡಬಾರದು ಎಂದು ಅಭಿಮಾನಿಯಿಂದ ಪ್ರಮಾಣ ಮಾಡಿಸಿಕೊಂಡರು.

ಅಂದಹಾಗೆ ಸಿದ್ದು ಸ್ವಾಮಿ ವೃತ್ತಿಯಲ್ಲಿ ಅಡುಗೆ ಕೆಲಸ ಹಾಗೂ ಆಟೋ ಡ್ರೈವರ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net