More

    ತಾಂತ್ರಿಕ ದೋಷದಿಂದ ಮತದಾನಕ್ಕೆ40 ನಿಮಿಷ ತಡ: ಸಮಸ್ಯೆ ಬಗೆಹರಿಯುವವರೆಗೂ ಕಾದು ಕುಳಿತ ಜನ

    ಹನುಮಸಾಗರ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ 60 ಗ್ರಾಮಗಳಲ್ಲಿ ಬುಧವಾರ ವಿಧಾನಸಭಾ ಚುನಾವಣೆಯ ಮತದಾನ ಶಾಂತಯುತವಾಗಿ ಜರುಗಿತು.


    ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಬೆಳಗ್ಗೆ 7.30 ಆದರೂ ಮತದಾನ ಪ್ರಾರಂಭವಾಗಲಿಲ್ಲ. ಸಾರ್ವಜನಿಕರು ಮತ ಕೇಂದ್ರದ ಮುಂದೆ ಕಾಯ್ದು ಕುಳಿತುಕೊಳ್ಳಬೇಕಾಯಿತು. 7.40ಕ್ಕೆ ಸೆಕ್ಟರ್ ಆಫೀಸರ್ ಬಸವರಾಜ ಬಂದು ಸಮಸ್ಯೆ ಸರಿಪಡಿಸಿದ ನಂತರ ಮತದಾನ ನಡೆಯಿತು.

    ಇದನ್ನೂ ಓದಿ: LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ

    ತಾಂತ್ರಿಕ ದೋಷದಿಂದ ಮತದಾನಕ್ಕೆ40 ನಿಮಿಷ ತಡ: ಸಮಸ್ಯೆ ಬಗೆಹರಿಯುವವರೆಗೂ ಕಾದು ಕುಳಿತ ಜನ
    ಹನುಮಸಾಗರದ ನೇಕಾರ ಕಾಲನಿಯ ಕುರಬಗೇರಾ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಸ್ಟ್ರೇಲಿಯಾದಿಂದ ಚಾಣುಕ್ಯ ಗಂಗಾವತಿ ದಂಪತಿ ಆಗಮಿಸಿ ಮತದಾನ ಹಕ್ಕು ಚಲಾಯಿಸಿದರು.


    ಇನ್ನುಳಿದಂತೆ ಹನುಮನಾಳ, ಬಾದಿಮನಾಳ, ಹನುಮಸಾಗರ, ಹೂಲಗೇರಿ ಹಾಗೂ ಜಹಗೀರಗುಡದೂರಿನ 5 ಸೆಕ್ಟರ್‌ಗಳ 103 ಮತ ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಐದು ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದ್ದು, 7 ಸೂಕ್ಷ್ಮ ಮತಗಟ್ಟೆ ಹಾಗೂ ಹನುಮಸಾಗರದ 15 ಮತಗಟ್ಟೆಗಳಲ್ಲಿ ಮತದಾರರು ಹಕ್ಕು ಚಲಾಯಿಸಿದರು.

    ಆಸ್ಟ್ರೇಲಿಯಾದಿಂದ ಬಂದು ಹಕ್ಕು ಚಲಾವಣೆ

    ಹನುಮಸಾಗರದ ನೇಕಾರ ಕಾಲನಿಯ ಕುರುಬಗೇರಾ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಚಾಣುಕ್ಯ ಗಂಗಾವತಿ ಎಂಬುವವರು ವಿದೇಶದಿಂದ ಬಂದು ಮತ ಚಲಾಯಿಸಿದರು. ಆಸ್ಟ್ರೇಲಿಯಾದಲ್ಲಿ ಮೆಕ್ಯಾನಿಕಲ್ ಇಂಜನಿಯರ್ ಆಗಿರುವ ಅವರು, ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿ, ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts