ಮೋದಿ ರೋಡ್ ಶೋ‌ಗೆ ಟಕ್ಕರ್ ನೀಡಲು ಮುಂದಾಗಿದ್ದ ಜೆಡಿಎಸ್; ಆರೋಗ್ಯದ ದೃಷ್ಟಿಯಿಂದ ದೇವೇಗೌಡರ ರೋಡ್ ಶೋ‌ ರದ್ದು!

hdd
Published on

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ‌ಗೆ ಟಕ್ಕರ್ ನೀಡಲು ಮುಂದಾಗಿದ್ದ ಜೆಡಿಎಸ್ ರೋಡ್ ಶೋ ರದ್ದಾಗಿದೆ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಆರೋಗ್ಯ ಹಿತ ದೃಷ್ಟಿಯಿಂದ ರದ್ದಾಗಿದೆ ಎನ್ನಲಾಗಿದೆ.

ಮಾರ್ಚ್ 26 ರಂದು ಬೆಂಗಳೂರಿನ ಕುಂಬಳಗೂಡಿನಿಂದ ಮೈಸೂರಿನವರೆಗೂ ರೋಡ್ ಶೋ ನಡೆಸಲು ಜೆಡಿಎಸ್ ಮುಂದಾಗಿತ್ತು. ಕಾರಣಾಂತರಗಳಿಂದ ರೋಡ್ ಶೋ ರದ್ದು ಮಾಡುವ ಕುರಿತು ಇಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಇಂದು ರೋಡ್ ಶೋ ಕುರಿತು ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮತ್ತು ಸಿಎಂ ಇಬ್ರಾಹಿಂ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ನಾಯಕರು ಮತ್ತು ಶಾಸಕರು ಭಾಗಿಯಾಗಿದ್ದರು.

ಹಳೇ ಮೈಸೂರು ಭಾಗದ 10 ಲಕ್ಷದ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲಾಗುತ್ತದೆ. ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ಹಾಗೂ ವೈದ್ಯರ ಸಲಹೆ ಮೇರೆಗೆ ರೋಡ್ ಶೋ ರದ್ದು ಮಾಡಲಾಗಿದೆ. ಯಥಾಸ್ಥಿತಿ ಮೈಸೂರಿನಲ್ಲಿ ಸಮಾರೋಪ‌ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net