More

    ಕುಡಿದ ಮತ್ತಿನಲ್ಲಿ ಹೆಂಡತಿಗೆ ಗುಂಡು ಹಾರಿಸಿದ ಬಿಜೆಪಿ ನಾಯಕ

    ಭೂಪಾಲ್‌: ಮದ್ಯದ ವಿಚಾರವಾಗಿ ಬಿಜೆಪಿ ನಾಯನೊಬ್ಬ ತನ್ನ ಹೆಂಡತಿಗೆ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

    ಇದನ್ನೂ ಓದಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಹಿನ್ನೆಲೆ: ಮಿಮ್ಸ್‌ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

    ರಾಜೇಂದ್ರ ಪಾಂಡೆ ಕೊಲೆ ಆರೋಪಿಯಾಗಿದ್ದು, ಕುಡಿತದ ಚಟ ಹೊಂದಿದ್ದಾನೆ. ಸೋಮವಾರದಂದು ಮನೆಯಲ್ಲಿಯೇ ಕುಳಿತು ಸಂಬಂಧಿಕರೊಬ್ಬರ ಜತೆ ಮದ್ಯ ಸೇವಿಸುತ್ತಿದ್ದ ವೇಳೆ ಪತ್ನಿ ಶೀಲ ವಿರೋಧಿಸಿದಾಗ ಜಗಳವಾಡಿದ್ದಾರೆ. ಈ ವೇಳೆ ಹಿರಿಯ ಮಗಳು ತನ್ನ ಪತಿಯೊಂದಿಗೆ ಮನೆಗೆ ಬಂದು ಅಜ್ಜನಿಗೆ ಈ ವಿಷಯ ತಿಳಿಸಿದ್ದಳು. 

    ಕೊನೆಗೆ ಕುಡಿದ ಮತ್ತಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಂದ್ರ, ಸಿಟ್ಟಿಗೆದ್ದು ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ. ಸೊಂಟಕ್ಕೆ ಗುಂಡು ತಗುಲಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ರಾಜೇಂದ್ರನ ಮಗಳು ಮತ್ತು ಅಳಿಯ ಮನೆಯಲ್ಲಿದ್ದು, ಕೊಲೆ ಮಾಡಿದ ಬಳಿಕ ಆರೋಪಿ ಮನೆಯಿಂದ ಓಡಿ ಹೋಗಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸ್ ತಂಡ ಶೋಧ ಆರಂಭಿಸಿದೆ.

    ಆರೋಪಿ ರಾಜೇಂದ್ರ ಈ ಹಿಂದೆ ಬಿಜೆಪಿಯ ಟಿಟಿ ನಗರ ಮಂಡಲದ ಕ್ಷೇತ್ರದ ಉಪಾಧ್ಯಕ್ಷರಾಗಿದ್ದರು. ಆದರೆ ಪ್ರಸ್ತುತ ಸ್ಥಾನಮಾನದ ಬಗ್ಗೆ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts