ಡ್ರಗ್ಸ್​​ ಪ್ರಕರಣದಲ್ಲಿ ಶಾರೂಕ್​ ಪುತ್ರನಿಗೆ ಕ್ಲೀನ್​​ಚಿಟ್​​ ​​: ಎಸ್​​ಐಟಿ ನೀಡಿದ ಕಾರಣವೇನು ಗೊತ್ತಾ?

Aryan Khan
Published on

ಮುಂಬೈ: ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪ್ರಕರಣದಲ್ಲಿ ಆರ್ಯನ್​ ಖಾನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ​​ ನೀಡಿದ್ದಾರೆ. ಕಳೆದ ಅಕ್ಟೋಬರ್​ 30 ರಂದು ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ಆರ್ಯನ್​ ಖಾನ್​​ನನ್ನು ಬಂಧಿಸಲಾಗಿತ್ತು.

ಆರ್ಯನ್​ ಬಳಿ ಡ್ರಗ್ಸ್​​​ ಇದೆ ಎಂದು ಅಂದು ಬಂಧಿಸಿದ ಅಧಿಕಾರಿಗಳು ಸಾಕ್ಷ್ಯ ಸಮೇತವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ 22 ದಿನ ಜೈಲು ಶಿಕ್ಷೆಯನ್ನೂ ಸಹ ಆರ್ಯನ್​ ಅನುಭವಿಸಿದ್ದರು. ಇದೀಗ ಅಧಿಕಾರಿಗಳ ಹೇಳಿಕೆ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​ ಕೊಟ್ಟಿದೆ.

ಆರ್ಯನ್​ ಖಾನ್​ ವಿರುದ್ಧ ಯಾವ ಸಾಕ್ಷ್ಯ ಆಧಾರಗಳು ಇಲ್ಲ, ಅವರು ಅಂದು ಪಾರ್ಟಿಯಲ್ಲಿ ಭಾಗವಹಿಸಿದ್ದರಷ್ಟೇ, ಡ್ರಗ್ಸ್​ ತೆಗೆದುಕೊಂಡಿರಲಿಲ್ ಎಂದು ಹೇಳಿದ್ದಾರೆ. ಸದ್ಯ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್​ ಹೆಸರಿಲ್ಲ. ಇದರಿಂದ ಶಾರೂಕ್​ ಖಾನ್​ ಕೂಡ ನಿರಾಳರಾಗಿದ್ದಾರೆ.

ಇನ್ನು ಪ್ರಕರಣದ ಪ್ರಮುಖ ತನಿಖೆ ಕೈಗೊಂಡಿದ್ದ ಸಮೀರ್​ ವಾಂಖೆಡೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net