More

    ಯಲಹಂಕದಲ್ಲಿ ಬೃಹತ್ ಲಸಿಕೆ ಕೇಂದ್ರಕ್ಕೆ ಚಾಲನೆ, ಮಹಿಳೆಯರಿಗೆ ಪಿಂಕ್ ಬೂತ್ ಕೌಂಟರ್

    ಬೆಂಗಳೂರು: ಕರೊನಾ ನಿಯಂತ್ರಿಸಲು ಕೇರ್ ಇಂಡಿಯಾ ಸಹಭಾಗಿತ್ವದಲ್ಲಿ ಬಿಬಿಎಂಪಿ ನಗರದ ಮೂರು ವಲಯಗಳಲ್ಲಿ ಬೃಹತ್ ಲಸಿಕಾ ಕೇಂದ್ರ ಸ್ಥಾಪಿಸಲಿದ್ದು, ಮೊದಲನೆಯದಾಗಿ ಯಲಹಂಕದ ಎನ್‌ಇಎಸ್ ವೃತ್ತ ಬಳಿಯ ಅಂಬೇಡ್ಕರ್ ಭವನದಲ್ಲಿ ಆರಂಭವಾದ ಬೃಹತ್ ಲಸಿಕಾ ಕೇಂದ್ರಕ್ಕೆ ಬುಧವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ನಂತರ, ಪೂರ್ವ ವಲಯದ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ಹಿಂಭಾಗದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಪಶ್ಚಿಮ ವಲಯದ ಮಲ್ಲೇಶ್ವರದ ಯಂಗ್‌ಸ್ಟರ್ಸ್‌ ಕಬ್ಬಡಿ ಕ್ಲಬ್ ಮೈದಾನದಲ್ಲಿ ಲಸಿಕಾ ಕೇಂದ್ರ ಪ್ರಾರಂಭವಾಗಲಿದೆ.

    ವಿವಿಧ ಸೌಲಭ್ಯಗಳು: ವಿಶೇಷವಾಗಿ ಲಸಿಕಾ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಲಸಿಕೆ ಪಡೆಯುವ ಸಲುವಾಗಿ ನೋಂದಣಿ ಮಾಡಿಸಲು ಪಿಂಕ್ ಕೌಂಟರ್ ತೆರೆಯಲಾಗಿದೆ. ಅಂಗವಿಕಲರಿಗೆ ವ್ಹೀಲ್‌ಚೇರ್ ವ್ಯವಸ್ಥೆಯಿದೆ. ಜನದಟ್ಟಣೆ ತಡೆಯಲು 4 ಲಸಿಕಾ ಬೂತ್‌ಗಳನ್ನು ತೆರೆಯಲಾಗಿದ್ದು, ಗರ್ಭೀಣಿಯರಿಗೆ, ಬಾಣಂತಿಯರಿಗೆ ಸೇರಿ ಅರ್ಹತೆ ಹೊಂದಿರುವ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಬೃಹತ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದ ಲಾನುಭವಿಗಳು ವಿರಾಮ ತೆಗೆದುಕೊಳ್ಳಲು ಹಾಗೂ ಪಡೆದ ಲಸಿಕೆಯಿಂದ ಏನಾದರೂ ಪರಿಣಾಮ ಉಂಟಾಗುವ ಸಂಭವವಿದ್ದಲ್ಲಿ ಅವರಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳನ್ನು ನೇಮಿಸಲಾಗಿದೆ. ಎಇಎ್ಐ ಕಿಟ್‌ಗಳ ಲಭ್ಯವಿರುತ್ತದೆ. ಲಸಿಕೆ ಪಡೆಯುವಂಥ ಜನರು ತಮ್ಮ ವಾಹನಗಳಲ್ಲಿ ಲಸಿಕೆ ನೀಡುವ ಸ್ಥಳಗಳಿಗೆ ತೆರಳಬಹುದು. ನೋಂದಣಿ ಮಾಡಿಸಿದ ಬಳಿಕ ಲಸಿಕೆ ಪಡೆಯಬಹುದು ಹಾಗೂ ಲಸಿಕೆ ಪಡೆದು 30 ನಿಮಿಷವರೆಗೆ ಪರಿವೀಕ್ಷಣೆಗೆ ಕಾಯಬಹುದು.

    ಇತರೆ ಸೌಲಭ್ಯಗಳು
    ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಸೆಲ್ಫಿ, ಪೋಟೊ ಕಾರ್ನರ್, ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೊ, ಲಕಗಳು, ಲಸಿಕೆ ಪಡೆದ ಜನರಿಗೆ ಕೋವಿಡ್ ವೈಬ್‌ಸೈಟ್‌ನಿಂದ ಡಿಜಿಟಲ್ ಪ್ರಮಾಣ ನೀಡಿಕೆ.

    VIDEO| ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಹೀಗಾ ಮಾಡೋದು?

    ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?

    ತಾಲಿಬಾನಿಗಳ ಗುಂಡಿಗೆ ಎದೆಯೊಡ್ಡಿ ನಿಂತ ಆಫ್ಘಾನ್​ ಮಹಿಳೆ: ವೈರಲ್​ ಫೋಟೋ ಸಾರಿದ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts