

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ವೇಯ್ಟ ಜೋನ್ ವತಿಯಿಂದ ಕುಂದಾಪುರದ ವಿಠಲವಾಡಿಯ ಕೀಳೇಶ್ವರಿ ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿನ ಘಟಕ ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಮಂಗಳವಾರ ಜರುಗಿತು.
ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಕುಂದಾಪುರ ವೇಯ್ಟ ಜೋನ್ ಅಧ್ಯಕ್ಷ ವಿಜಯ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಜತ್ ಹೆಗ್ಡೆ, ಗಣೇಶ್ ಕೆ.ಟಿ., ವಿನೋದ್, ಮಂಜುನಾಥ್ ವಿಠಲವಾಡಿ, ರಚನ್, ಸುಧಾಕರ್, ಚಂದ್ರ, ರೇಖಾ, ನಾಗಪ್ಪ ಪೂಜಾರಿ, ಸುಭಾಷ್ ಪೂಜಾರಿ, ಹರೀಶ್ ಕುಂದರ್, ಸಂದೀಪ್ ಗೋಪಾಡಿ, ಪ್ರದೀಪ್ ಬಂಗೇರ ಉಪಸ್ಥಿತರಿದ್ದರು. ಹುಸೇನ್ ಹೈಕಾಡಿ ವಂದಿಸಿದರು. ಭಾಸ್ಕರ್ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು.