

ನೀರು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಹಾಗಂತ ಹೇಗೆಂದರೆ ಹಾಗೆ ನೀರು ಕುಡಿಯಬಾರದು. ಇದಕ್ಕೂ ಒಂದು ಸೂಕ್ತವಾದ ವಿಧಾನವಿದೆ ಎಂಬುದು ನೆನಪಿರಲಿ. ನೀರು ಕುಡಿಯುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಖಂಡಿತವಾಗಿ ತೆಗೆದುಕೊಳ್ಳಬೇಕು. ನಿಮಗೆ ಅನಿಸಬಹುದು ನೀರು ಕುಡಿಯುವ ವಿಚಾರದಲ್ಲಿ ಯಾರಾದರೂ ತಪ್ಪು ಮಾಡುತ್ತಾರಾ ಅಂತ. ಹೌದು, ಕೆಲವರು ಮಾಡುತ್ತಾರೆ. ಅದು ಹೇಗೆಂದರೆ ನಿಂತುಕೊಂಡು ನೀರು ಕುಡಿಯುವ ಅಭ್ಯಾಸ ಕೆಲವರಲ್ಲಿದೆ. ಈ ರೀತಿ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಚ್ಚರ!
ಆರೋಗ್ಯಕ್ಕೆ ನೀರು ಬಹಳ ಮುಖ್ಯ. ನೀರನ್ನು ಸರಿಯಾಗಿ ತೆಗೆದುಕೊಳ್ಳದಿದ್ದರೆ ಆರೋಗ್ಯ ಹಾಳಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳು, ರಕ್ತಪರಿಚಲನೆ, ದೇಹದ ಉಷ್ಣಾಂಶ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ನೀರು ಬಹಳ ಮುಖ್ಯ. ಹೈಡ್ರೇಟೆಡ್ ಆಗಿರುವುದು ಆರೋಗ್ಯಕ್ಕೆ ಒಳ್ಳೆಯದು. ಚರ್ಮಕ್ಕೂ ಒಳ್ಳೆಯದು. ಅಲ್ಲದೆ, ಕಿಡ್ನಿಯ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ದೇಹಕ್ಕೆ ಬೇಕಾದಷ್ಟು ನೀರನ್ನು ತೆಗೆದುಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ನಿಂತುಕೊಂಡು ನೀರು ಕುಡಿಯಬೇಡಿ.
ನಿಂತುಕೊಂಡು ನೀರನ್ನು ಕುಡಿಯುವುದರಿಂದ ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
* ನಿಂತಿರುವಾಗ ಅಥವಾ ನಡೆಯುವಾಗ ನೀರು ಕುಡಿಯುವುದು ಒಳ್ಳೆಯದಲ್ಲ. ಈ ರೀತಿ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
* ಮೂತ್ರಪಿಂಡದ ಕಲ್ಲುಗಳು ಅಥವಾ ಮೂತ್ರಪಿಂಡದ ತೊಂದರೆಯಾಗುವ ಸಾಧ್ಯತೆಯಿದೆ.
* ಮೂಳೆಗಳ ಆರೋಗ್ಯಕ್ಕೂ ಹಾನಿಯಾಗುತ್ತದೆ. ಸಂಧಿವಾತದಂತಹ ಸಮಸ್ಯೆಗಳೂ ಬರಬಹುದು.
* ನಿಂತಿರುವಾಗ ಅಥವಾ ನಡೆಯುವಾಗ ನೀರು ಕುಡಿಯುವುದು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.
* ನರಗಳ ಮೇಲೂ ಪರಿಣಾಮ ಬೀರುತ್ತದೆ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಬರಬಹುದು.
ನಿಂತು ನೀರು ಕುಡಿಯುವುದರಿಂದ ಈ ಮೇಲಿನ ಎಲ್ಲ ಸಮಸ್ಯೆಗಳು ಉಂಟಾಗುವ ಸಾದ್ಯತೆ ಇದೆ. ಆದ್ದರಿಂದ ಕುಳಿತುಕೊಂಡು ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ. ದಿನಕ್ಕೆ 3 ರಿಂದ ನಾಲ್ಕು ಲೀಟರ್ ನೀರನ್ನು ತಪ್ಪದೇ ಕುಡಿಯಿರಿ. ಅತಿಮುಖ್ಯವಾಗಿ ನೀರನ್ನು ಯಾವಾಗಲೂ ಗುಟುಕು ಗುಟುಕಾಗಿ ಕುಡಿಯಿರಿ. ಅದನ್ನು ಬಿಟ್ಟು ಘಟಘಟನೆ ಕುಡಿಯಬೇಡಿ. ಇದರಿಂದಲೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.