ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕರೊನಾ ಸೋಂಕಿನಿಂದ ನಿಮಗಿದೆಯಂತೆ ಕೊಂಚ ರಿಯಾಯಿತಿ!

coffee
Published on

ವಾಷಿಂಗ್ಟನ್: ನೀವು ಕಾಫಿ ಪ್ರಿಯರೇ? ದಿನಕ್ಕೆ ಒಂದೆರೆಡು ಕಪ್ ಕಾಫಿ ಕುಡಿಯಲಿಲ್ಲವೆಂದರೆ ದಿನವೇ ವೇಸ್ಟ್ ಆದ ಫೀಲ್ ನಿಮಗಿರುತ್ತದೆಯೇ? ಹಾಗಿದ್ದರೆ ನಿಮಗೊಂದು ಶುಭ ಸುದ್ದಿ ಇಲ್ಲಿದೆ. ಕಾಫಿ ಕುಡಿಯದವರಿಗೆ ಹೋಲಿಸಿದರೆ ಕಾಫಿ ಕುಡಿಯುವವರಿಗೆ ಕರೊನಾದ ಅಪಾಯ ಕಡಿಮೆ ಎನ್ನುವ ವರದಿಯೊಂದು ಹೊರ ಬಿದ್ದಿದೆ.


ಇಂತದ್ದೊಂದು ಸಮೀಕ್ಷೆಯನ್ನು ಅಮೆರಿಕದ ನಾರ್ತ್​ವೆಸ್ಟರ್ನ್ ಯುನಿವರ್ಸಿಟಿ ನಡೆದಿದೆ. ಕಾಫಿ ಸೇವನೆಯು ಸಿಆರ್​ಪಿ, ಇಂಟರ್ಲ್ಯುಕಿನ್ -6 (ಐಎಲ್ -6), ಮತ್ತು ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ ಐ (ಟಿಎನ್ಎಫ್-ಐ) ನಂತಹ ಉರಿಯೂತದ ಬಯೋಮಾರ್ಕರ್‌ಗಳೊಂದಿಗೆ ಸಂಬಂಧ ಹೊಂದಿದೆ. ಇದು ಕರೊನಾ ಸೋಂಕಿಗೂ ಸಂಬಂಧಿಸಿದೆ ಎನ್ನಲಾಗಿದೆ. ದಿನಕ್ಕೆ 2 ಕಪ್ ಕಾಫಿ ಕುಡಿಯುವವರಿಗೆ ಕರೊನಾ ಅಪಾಯ ಶೇ. 10ರಷ್ಟು ಕಡಿಮೆಯಿರುತ್ತದೆ ಎಂದು ಯುನಿವರ್ಸಿಟಿ ತನ್ನ ವರದಿಯಲ್ಲಿ ತಿಳಿಸಿದೆ.


ಹಾಗೆಯೇ ಕಾಫಿ ಕುಡಿಯದವರಿಗೆ ಹೋಲಿಸಿದರೆ ಕಾಫಿ ಕುಡಿಯುವವರಿಗೆ ನ್ಯುಮೋನಿಯಾದ ಅಪಾಯವೂ ಕಡಿಮೆ ಇದೆ ಎಂದು ತಿಳಿಸಲಾಗಿದೆ.


ಈ ಅಧ್ಯಯನವು ಬ್ರಿಟನ್​​ನ ಬಯೋಬ್ಯಾಂಕ್‌ನಲ್ಲಿ 40,000 ವಯಸ್ಕರ ಡೇಟಾವನ್ನು ಮೌಲ್ಯಮಾಪನ ಮಾಡಿದೆ. ಅಧ್ಯಯನವು ಆಹಾರದ ದಿನಚರಿ ಮತ್ತು COVID-19 ಸೋಂಕಿನ ನಡುವಿನ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಿದೆ. ಕಾಫಿ ಜತೆಯಲ್ಲಿ ಹೆಚ್ಚಿನ ಸಸ್ಯಾಹಾರವನ್ನು ಸೇವಿಸುವವರಿಗೆ ಕರೊನಾ ಆತಂಕ ಕಡಿಮೆ ಎನ್ನಲಾಗಿದೆ.

ಇದು ಒಂದು ವಿಶ್ವವಿದ್ಯಾಲಯದ ಅಧ್ಯಯನವಾಗಿದ್ದು, ವೈದ್ಯಕೀಯವಾಗಿ ಯಾವುದೇ ರೀತಿಯ ದೃಢೀಕರಣ ನೀಡಲಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net