

Diabetes : ದೇಹದಲ್ಲಿರುವ ಸಕ್ಕರೆ ಮಟ್ಟವು ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಮಾಡಲು ಪ್ರಾರಂಭಿಸಿದಾಗ ಇದು ಗಂಭೀರವಾಗಿ ಆರೋಗ್ಯದಲ್ಲಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಮೊದ ಮೊದಲು ಆಯಾಸ, ಹೆಚ್ಚಿನ ಬಾಯಾರಿಕೆ, ತೂಕ ನಷ್ಟ, ದೃಷ್ಟಿ ಮಂದವಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇವುಗಳನ್ನು ನಿರ್ಲಕ್ಷ ಮಾಡಲು ಹೋದಲ್ಲಿ ಮಧುಮೇಹವಾಗಿ ಬದಲಾಗುತ್ತದೆ.
ಈ ರೋಗವು ಕ್ರಮೇಣವಾಗಿ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಆಧುನಿಕ ಔಷಧಿಗಳನ್ನು ಬಳಸಿದರೂ, ಕೆಲವೊಮ್ಮೆ ಅವು ನಿಯಂತ್ರಣವಾಗುವುದಿಲ್ಲ. ಆಧುನಿಕ ಔಷಧಿಗಳು ಲಭ್ಯವಿದ್ದರೂ, ಅವು ನಿಯಂತ್ರಿಸಿದರೂ, ಅವು ಆಧಾರವಾಗಿರುವ ಸಮಸ್ಯೆಯನ್ನು ನಿವಾರಿಸುವುದಿಲ್ಲ.
ಈ ದೃಷ್ಟಿಕೋನದಿಂದ ಆಹಾರ, ದಿನಚರಿ ಮತ್ತು ಕೆಲವು ನೈಸರ್ಗಿಕ ಪಾನೀಯಗಳು ಸರಿಯಾದ ಬಳಕೆಯು ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಸಮತೋಲನದಲ್ಲಿಡಬಹುದು. ಈ ಪಾನೀಯಗಳು ದೇಹದಲ್ಲಿರುವ ಇನ್ಸುಲಿನ್ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ದಿನವಿಡೀ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗಿದ್ದರೆ ಯಾವ ಪಾನೀಯಗಳು ತಿಳಿಯೋಣ ಬನ್ನಿ.
ಮೆಂತ್ಯ ಬೀಜಗಳು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಭಾರೀ ಒಳ್ಳೆಯದು ಎಂದು ನಂಬಲಾಗುತ್ತದೆ. ಇವು ದೇಹದಲ್ಲಿ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಆದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆಯನ್ನು ಬೇಗನೆ ಹೆಚ್ಚಳವಾಗಲು ಬಿಡುವುದಿಲ್ಲ. ಹಾಗಾಗಿ ಪ್ರತಿದಿನ ರಾತ್ರಿ 1 ಚಮಚ ಮೆಂತ್ಯೆ ಬೀಜವನ್ನು ರಾತ್ರಿಯಿಡೀ ನೆನಸಿ ಬೆಳಿಗ್ಗೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಸಮತೋಲನವನ್ನು ಕಾಯ್ದಿರಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಹಾಗಲಕಾಯಿಯನ್ನು ಮಧುಮೇಹಿಗಳ ಆರೋಗ್ಯ ಪದಾರ್ಥ ಎಂದು ಕರೆಯಲಾಗುತ್ತದೆ. ಈ ಹಾಗಲಕಾಯಿಯಲ್ಲಿ ಚರಂಟಿನ್ ಮತ್ತು ಪಾಲಿಪೆಪ್ಟೈಡ್- ಪಿ ಎಂಬ ಸಂಯುಕ್ತಾಂಶಗಳಿದ್ದು, ಇದು ದೇಹದಲ್ಲಿ ಇನ್ಸುಲಿನ್ನಂತೆ ಕಾರ್ಯ ನಿರ್ವಹಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಸೇವಿಸುವುದರಿಂದ ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಯಸಿದಲ್ಲಿ, ಅದರ ರುಚಿಯನ್ನು ಸುಧಾರಿಸಲು ನೀವು ಈ ರಸಕ್ಕೆ ಸೌತೆಕಾಯಿ ಅಥವಾ ಟೊಮೆಟೊ ರಸವನ್ನು ಸೇರಿಸಬಹುದು.
ನೆಲ್ಲಿಕಾಯಿಯು ಅಧಿಕವಾಗಿ ವಿಟಮಿನ್ ಸಿ ಯ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಮೇದೋಜ್ಜೀರಕ ಗ್ರಂಥಿಯಲ್ಲಿರುವ ಬೀಟಾ ಕೋಶಗಳನ್ನು ರಕ್ಷಿಸುತ್ತದೆ. ಇದರ ರಸವನ್ನು ಸೇವಿಸುವುದರಿಂದ HbA1c ಕಡಿಮೆಯಾಗುತ್ತದೆ. ಹಾಗೆಯೇ ದೇಹದಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ.
ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಪದಾರ್ಥಗಳು ಇನ್ಸುಲಿನ್ನಂತೆಯೇ ಕಾರ್ಯನಿರ್ವಹಿಸುತ್ತವೆ. ಇವು ಜೀವಕೋಶಗಳು ಗ್ಲೂಕೋಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ನೆನಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾಗೆಯೇ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಜೀವಕೋಶಗಳನ್ನು ರಕ್ಷಿಸುತ್ತವೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.