30ರಂದು ಕನಸಿನ ಮನೆ ವಾಮದಪದವು ಶಾಖೆ ಶುಭಾರಂಭ

New Project (4)
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆಯವರ ಶುಭಾರ್ಶೀವಾದಗಳೊಂದಿಗೆ ಕನಸಿನ ಮನೆ ಎಂದೇ ಖ್ಯಾತಿ ಪಡೆದಿರುವ ಉಜಿರೆ ಲಕ್ಷ್ಮೀ ಇಂಡಸ್ಟೀಸ್‌ನ ಕನಸಿನ ಮನೆ ವಾಮದಪದವು ಶಾಖೆ ಕಲಸಡ್ಕ ಕಾಂಪ್ಲೆಕ್ಸ್‌ನಲ್ಲಿ ಮಾ.30ರಂದು ಶುಭಾರಂಭಗೊಳ್ಳಲಿದೆ.

ಕಳೆದ ಹಲವು ದಶಕಗಳಿಂದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆ, ಸಮಾಜದಲ್ಲಿ ಬೆಳೆಯುತ್ತಾ ಬಂದಿದ್ದು 400 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ನೆರೆಯ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಶಾಖೆ ತೆರೆಯಲಿದ್ದು ಗ್ರಾಹಕರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡಲು ಸಜ್ಜಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಶಾಖೆ ಉದ್ಘಾಟಿಸಲಿರುವವರು. ಉದ್ಯಮಿ, ಬರೋಡ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ಶಶಿಧರ್ ಶೆಟ್ಟಿ ನವಶಕ್ತಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಕೆ.ಭಟ್, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ ಹಾಗೂ ಚೆನ್ನೈತೊಡಿ ಗ್ರಾ.ಪಂ. ಅಧ್ಯಕ್ಷೆ ವನಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು ಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ.ಮೋಹನ್ ಕುಮಾರ್ ಹಾಗೂ ರೇಶ್ಮಾ ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ತಂತ್ರಜ್ಞಾನದ ಆಕರ್ಷಕ ವಿನ್ಯಾಸ

ನೂತನ ತಂತ್ರಜ್ಞಾನದ ಆಕರ್ಷಕ ವಿನ್ಯಾಸಗಳೊಂದಿಗೆ ಗ್ರಾಹಕರ ಕನಸಿನ ಮನೆಗಳಿಗೆ, ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸೌಂದರ್ಯದ ಸ್ಪರ್ಶ ನೀಡಲಿದೆ. ಸಿಮೆಂಟ್, ಫೈಬರ್, ಸ್ಟೀಲ್‌ನ ದಾರಂದ, ಕಿಟಕಿ ಫ್ರೇಮ್, ಬಾಗಿಲು, ಡಬ್ಲುೃಪಿಸಿ ಡೋರ್ ಫ್ರೇಮ್, ವಿಂಡೋಸ್ ಫ್ರೇಮ್‌ಗಳು, ಅಲ್ಯೂಮಿನಿಯಂ, ಬಾತ್ ರೂಮ್ ಡೋರ್ಸ್‌ ಮಳಿಗೆಯಲ್ಲಿ ಲಭ್ಯವಿವೆ ಎಂದು ಮಾಲೀಕ ಮೋಹನ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net