More

    ದ್ರಾವಿಡ್‌ಗೆ ನಾಯಕತ್ವ ಶ್ರೇಯ ದಕ್ಕಲಿಲ್ಲ ಎಂದು ಗಂಭೀರ್ ಹೇಳಿದ್ಯಾಕೆ..?

    ನವದೆಹಲಿ: ಕನ್ನಡಿಗ ರಾಹುಲ್ ದ್ರಾವಿಡ್, ಇಂದಿನ ಯುವ ಕ್ರಿಕೆಟಿಗರ ಪಾಲಿಗೆ ಮಾದರಿಯಾಗುವ ವ್ಯಕ್ತಿ. ಆಡುವ ದಿನಗಳಿಂದಲೂ ಯುವಕರ ಪಾಲಿಗೆ ದ್ರಾವಿಡ್ ಸ್ಫೂರ್ತಿಯಾದರೂ ಅವರ ಸಾಧನೆ ಮಾತ್ರ ಎಲೆಮರೆ ಕಾಯಿಯಂತೆ. ಅದೇ ರೀತಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿದ್ದರೂ ಅವರಿಗೆ ಅಂಥ ಶ್ರೇಯ ಸಲ್ಲಲಿಲ್ಲ ಎಂದು ಹೇಳುತ್ತಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ದ್ರಾವಿಡ್ ನಾಯಕತ್ವಕ್ಕೆ ಕ್ರೆಡಿಟ್ ಸಿಗದೇ ಇರುವುದು ಬೇಸರದ ಸಂಗತಿ ಎಂದಿದ್ದಾರೆ.

    ಇದನ್ನೂ ಓದಿ: VIDEO| ಕರೊನಾ ಸೋಂಕಿತ ಟೆನಿಸ್ ಆಟಗಾರರ ಜತೆ ಜೋಕೊವಿಕ್ ಪಾರ್ಟಿ, ವಿಡಿಯೋ ವೈರಲ್!

    ಭಾರತದ ಯಶಸ್ವಿ ನಾಯಕರ ಬಗ್ಗೆ ಮಾತನಾಡುವುದಾದರೆ ಕೇವಲ ಸೌರವ್ ಗಂಗೂಲಿ, ಎಂಎಸ್ ಧೋನಿ, ಇತ್ತೀಚೆಗೆ ವಿರಾಟ್ ಕೊಹ್ಲಿ ಬಗ್ಗೆಯಷ್ಟೇ ಮಾತನಾಡುತ್ತೇವೆ. ನಾನು ಕಂಡಂತೆ ದ್ರಾವಿಡ್ ಕೂಡ ಒಬ್ಬ ಯಶಸ್ವಿ ನಾಯಕ. ದ್ರಾವಿಡ್ ನಾಯಕತ್ವದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನೆಲದಲ್ಲೂ ಗೆಲುವು ದಾಖಲಿಸಿತ್ತು ಎಂದು ಬಿಜೆಪಿ ಸಂಸದರೂ ಆಗಿರುವ ಗಂಭೀರ್ ಹೇಳಿದ್ದಾರೆ. ಅವರನ್ನು ಕಡಿಮೆ ದರ್ಜೆ ನಾಯಕನಾಗಿ ನೋಡಲಾಗುತ್ತಿದೆ. ಸಚಿನ್ ತೆಂಡುಲ್ಕರ್‌ರಂಥ ದಿಗ್ಗಜರೊಂದಿಗೆ ಆಡಿದಾಗ ದ್ರಾವಿಡ್ ಸಾಧನೆ ನಗಣ್ಯವಾಯಿತು.ಅವಷ್ಟು ಮಾದರಿ ಕ್ರಿಕೆಟಿಗ ಭಾರತದಲ್ಲಿ ಮತ್ತೊಬ್ಬರಿಲ್ಲ ಎಂದಿದ್ದಾರೆ.

    ದ್ರಾವಿಡ್‌ಗೆ ನಾಯಕತ್ವ ಶ್ರೇಯ ದಕ್ಕಲಿಲ್ಲ ಎಂದು ಗಂಭೀರ್ ಹೇಳಿದ್ಯಾಕೆ..?ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ

    ದ್ರಾವಿಡ್ ನಾಯಕತ್ವದಲ್ಲಿ ಭಾರತ ಆಡಿದ 79 ಏಕದಿನ ಪಂದ್ಯಗಳ ಪೈಕಿ 42 ಗೆಲುವು ದಾಖಲಿಸಿತ್ತು. ಜತೆಗೆ ಸತತ 14 ಪಂದ್ಯಗಳಲ್ಲಿ ರನ್ ಚೇಸ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ದ್ರಾವಿಡ್ ನಾಯಕತ್ವದಲ್ಲಿಯೇ ಭಾರತ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನೆಲದಲ್ಲಿ ಗೆಲುವು ದಾಖಲಿಸಿತ್ತು. 2007ರ ವಿಶ್ವಕಪ್‌ನಲ್ಲಿ ದ್ರಾವಿಡ್ ನಾಯಕತ್ವದ ಭಾರತ ತಂಡ ಲೀಗ್ ಹಂತದಲ್ಲಿಯೇ ಮುಗ್ಗರಿಸಿತ್ತು. 164 ಟೆಸ್ಟ್ ಪಂದ್ಯಗಳಿಂದ 13288 ರನ್ ಹಾಗೂ 344 ಏಕದಿನ ಪಂದ್ಯಗಳಿಂದ 10889 ರನ್ ಕಲೆಹಾಕಿದ್ದಾರೆ. ಸದ್ಯ ಎನ್‌ಸಿಎ ಮುಖ್ಯಸ್ಥರಾಗಿ ಕಾಯನಿರ್ವಹಿಸುತ್ತಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸಿದ್ದರು.

    ಬೆಂಗಳೂರಲ್ಲೇ ಇದ್ದರೂ ಮೂರೂವರೆ ತಿಂಗಳ ಬಳಿಕ ಮಗಳ ನೋಡಿದ ಎಸ್‌ವಿ ಸುನೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts