

ಬೆಳ್ತಂಗಡಿ: ಬಳಂಜ ಶಾಲಾ ಹಳೇ ವಿದ್ಯಾರ್ಥಿ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆಯವರು ಅವರ ಇಕೋ ಫ್ರೇಶ್ ಫಾರ್ಮ್‌ನಲ್ಲಿ ಬೆಳೆದ ಡ್ರ್ಯಾಗನ್ಫ್ರೂಟ್ ಪ್ರಥಮ ಬೆಳೆಯನ್ನು ಬಳಂಜ ಶಾಲೆಯ ಎಲ್ಲ ಮಕ್ಕಳಿಗೆ ವಿತರಿಸಿದರು.
ಪ್ರಮುಖರಾದ ಕೆ.ವಸಂತ ಸಾಲಿಯಾನ್, ಎಚ್.ಧರ್ಣಪ್ಪ ಪೂಜಾರಿ, ಬಳಂಜ ಶಾಲಾ ಶಿಕ್ಷಣ ಟ್ರಸ್ ಅಧ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಕೀಲ್, ಕಾರ್ಯದರ್ಶಿ ನಿರಂಜನ್, ಬಳಂಜ ಶಾಲಾ ಮುಖ್ಯಶಿಕ್ಷಕಿ ಸುಲೋಚನ, ರಂಗಸ್ವಾಮಿ, ಮಾಜಿ ಪ್ರಭಾರ ಮುಖ್ಯಶಿಕ್ಷಕ ವಿಲ್‌ಫ್ರೇಡ್ ಪಿಂಟೋ, ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಶಿಕ್ಷಣ ಟ್ರಸ್ಟ್ ಪದಾಧಿಕಾರಿಗಳಾದ ಪ್ರಮೋದ್ ಕುಮಾರ್ ಜೈನ್, ಸಂತೋಷ್ ಕುಮಾರ್ ಕಾಪಿನಡ್ಕ, ರತ್ನರಾಜ್, ಪ್ರವೀಣ್ ಕುಮಾರ್ ಎಚ್.ಎಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದವರು, ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಊರವರು ಸಹಕರಿಸಿದರು.