

ಧಾರವಾಡ: ಧರ್ಮಸ್ಥಳ ಧರ್ಮಾಧಿಕಾರಿ, ಜೆಎಸ್‌ಎಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಡಿ.ವೀರೇಂದ್ರ ಹೆಗಡೆ ಅವರ 75ನೇ ಜನ್ಮದಿನದ ಹಿನ್ನೆಲೆ ಧಾರವಾಡದಲ್ಲಿ ವಿಶ್ವದಾಖಲೆಯ ಮೂಲಕ ಮಕ್ಕಳು ಶುಭ ಕೋರಿದರು.
ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಸೋಮವಾರ 200 ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಗಿಟಾರ್ ನುಡಿಸಿ ವೀರೇಂದ್ರ ಹೆಗಡೆ ಅವರಿಗೆ ಶುಭಾಶಯ ತಿಳಿಸಲಾಯಿತು. ಜೆಎಸ್‌ಎಸ್ ಬಯಲು ನಾಟ್ಯಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಟಾರ್ ನುಡಿಸುವ ಮೂಲಕ ವಿಶೇಷವಾಗಿ ಶುಭಾಶಯ ತಿಳಿಸಿದರು. ಇದನ್ನು ದಾಖಲೆ ಮಾಡಿಕೊಂಡ ವಿಶ್ವದಾಖಲೆ ಸಂಸ್ಥೆಯ ಪ್ರತಿನಿಧಿಗಳು, ಜೆಎಸ್‌ಎಸ್ ಕಾರ್ಯದರ್ಶಿ ಡಾ.ಅಜಿತ ಪ್ರಸಾದರಿ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.