ಯಲ್ಲಾಪುರದಲ್ಲಿ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಉದ್ಘಾಟನೆ

joshi 2
Published on

ಉತ್ತರ ಕನ್ನಡ: ಯಲ್ಲಾಪುರದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಅನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿ.ಆರ್.ಎಲ್‌.‌ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಕವಿವಿ ಕುಲಪತಿ ಕೆ.ಬಿ.ಗುಡಸಿ, ವಿಶ್ವದರ್ಶನ ಸಂಸ್ಥೆಯ ಉಪಾಧ್ಯಕ್ಷ ಕೆ.ಬಿ.ಶೆಟ್ಟಿ ಉಪಸ್ಥಿತರಿದ್ದರು.

ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಉದ್ಘಾಟಿಸಿದ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ವಿಜಯ ಸಂಕೇಶ್ವರ ಅವರ ವಿಜಯವಾಣಿ ಇಂದು ನಂ1 ಪತ್ರಿಕೆಯಾಗಿ ಹೊರಹೊಮ್ಮಿದೆ. ಪತ್ರಿಕೆ ಈ ಮಟ್ಟಕ್ಕೆ ಬೆಳೆಯಲು ನಿರ್ಣಯ, ಪರಿಶ್ರಮ ಎಲ್ಲವೂ ಬೇಕು. ಆ ಒಂದು ಕೆಲಸವನ್ನು ಅವರು ಮಾಡಿದ್ದಾರೆ ಎಂದು ಪ್ರಶಂಸಿಸಿದರು. ಪತ್ರಕರ್ತನಾದವನಿಗೆ ನಾಲ್ಕು ಸಂಗತಿಗಳ ಬಗ್ಗೆ ಗೊತ್ತಿರಬೇಕು ಪ್ರಸ್ತುತ ರಾಜಕೀಯದ ಬಗ್ಗೆ ತಿಳಿದಿರಬೇಕು, ಆರ್ಥಿಕ ಹಾಗೂ ನ್ಯಾಯಶಾಸ್ತ್ರದ ಬಗ್ಗೆ ತಿಳಿದಿರಬೇಕು. ಇದೆಲ್ಲದರ ಜತೆಗೆ ವಿಮರ್ಶೆ ಮಾಡುವ ಬುದ್ಧಿ ಇರಬೇಕು ಎಂದು ಪತ್ರಿಕೆ ಹಾಗೂ ಪತ್ರಕರ್ತರ ಕುರಿತು ವಿವರವಾಗಿ ಅವರು ಇದೇ ಸಂದರ್ಭದಲ್ಲಿ ಮಾತನಾಡಿದರು.

ಮಧ್ಯಾಹ್ನ ತಾಳಮದ್ದಲೆ ಕಾರ್ಯಕ್ರಮ

ಇಂದು ಮಧ್ಯಾಹ್ನ 2.30 ಕ್ಕೆ ಪ್ರಸಿದ್ಧ ಕಲಾವಿದರಿಂದ ಕರ್ಣಭೇದನ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಹಂಡ್ರಮನೆ, ಪ್ರಮೋದ ಹೆಗಡೆ ಕಬ್ಬಿನಗದ್ದೆ ಭಾಗವಹಿಸುವರು. ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ದಿವಾಕರ ಹೆಗಡೆ ಕೆರೆಹೊಂಡ, ಎಂ.ಎನ್.ಹೆಗಡೆ ಹಳವಳ್ಳಿ, ಡಾ.ಡಿ.ಕೆ.ಗಾಂವ್ಕರ ಅರ್ಥಧಾರಿಗಳಾಗಿ ಪಾತ್ರಚಿತ್ರಣ ನೀಡಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net