

ಮಂಗಳೂರು : ತುಳುನಾಡಿನಾದ್ಯಂತ ನೂರಾರು ನಾಗಬನಗಳು ಪವಿತ್ರ ಸ್ಥಳಗಳಾಗಿ ಪೂಜಿಸಲ್ಪಟ್ಟಿವೆ .ಈ ಪ್ರದೇಶದ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಾಗಬನಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಇತಿಹಾಸ ತಜ್ಞ ಡಾ. ತುಕಾರಾಮ ಪೂಜಾರಿ ಹೇಳಿದರು.
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಅವರು ‘ತುಳುನಾಡಿನ ನಾಗಬನಗಳ ಅಳಿವು, ಉಳಿವು ’ವಿಷಯದ ಕುರಿತು ಉಪನ್ಯಾಸ ನೀಡಿದರು.
ನಾಗಮನದ ತಾಣದಲ್ಲಿರುವ ವೈವಿಧ್ಯಮಯ ಸಸ್ಯವರ್ಗವು ಈ ಪ್ರದೇಶದ ನೀರಿನ ತಳವನ್ನು ಉಳಿಸಿಕೊಳ್ಳಲು ಕೊಡುಗೆ ನೀಡುತ್ತದೆ. ಇಂತಹ ನಾಗಬನಗಳನ್ನು ಸಂರಕ್ಷಿಸುವಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಂಶೋಧಕಿ ಡಾ.ಇಂದಿರಾ ಹೆಗ್ಡೆ ಉಪಸ್ಥಿತರಿದ್ದರು. ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಷ್‌ಚಂದ್ರ ಬಸು ಕಾರ್ಯಕ್ರಮ ನಿರೂಪಿಸಿದರು.