

ಬೆಳ್ತಂಗಡಿ: ಉಜಿರೆ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದ ಡೀನ್ ಮತ್ತು ಉಪಪ್ರಾಂಶುಪಾಲೆ ಡಾ.ಸುಜಾತ ದಿನೇಶ್ ಸಲ್ಲಿಸಿದ ಯೂಸ್ ಆಫ್ ಇಂಟೆಗ್ರೇಟೆಡ್ ಯೋಗ ಆ್ಯಂಡ್ ನ್ಯಾಚುರೋಪತಿ ಇಂಟರ್‌ವೆನ್ಶನ್ ಟು ಇಂಪ್ರೂವ್ ಅಟೊನೋಮಿಕ್ ಡಿಸ್ ಫಂಕ್ಷನ್, ಫಂಕ್ಷನಲ್ ಡಿಸ್ಸೆಬಿಲಿಟಿ ಆ್ಯಂಡ್ ಕ್ವಾಲಿಟಿ ಆಫ್ ಲೈಫ್ ಇನ್ ಪೇಷಂಟ್ಸ್ ವಿದ್ ಸ್ಪೈನಲ್ ಕೋರ್ಡ್ ಇಂಜ್ಯುರಿ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ಯೂನಿವರ್ಸಿಟಿ ಪಿಎಚ್.ಡಿ ಪದವಿ ನೀಡಿದೆ. ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಉಪಕುಲಪತಿ ಡಾ. ಮಂಜುನಾಥ್ ಎನ್.ಕೆ. ಮಾರ್ಗದರ್ಶಕರಾಗಿದ್ದರು. ಇವರು ಉಜಿರೆಯ ಹಿರಿಯ ಪಶುವೈದ್ಯ ಡಾ.ದಿನೇಶ್ ಎನ್. ಸರಳಾಯ ಅವರ ಪತ್ನಿ. ಧರ್ಮಸ್ಥಳ ಶಾಂತಿವನದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.