ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ: ಅಳಿಯ ರಿಷಿ ಸುನಕ್​ ಕುರಿತು ಹೇಳಿದ್ದೇನು?

ಸುದಾಮೂರ್ತಿ
Published on

ಕೋಲಾರ: ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಶುಕ್ರವಾರ ಬೆಳಗ್ಗೆ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ ಕೋಲಾರಕ್ಕೆ ಆಗಮಿಸಿದ್ದ ಸುಧಾಮೂರ್ತಿ, ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸುಧಾಮೂರ್ತಿ, ಕೋಲಾರಕ್ಕೆ ಬಂದಾಗೆಲ್ಲಾ ಕೋಲಾರಮ್ಮ ದೇವಾಲಯಕ್ಕೆ ಬರೋದು ವಾಡಿಕೆ. ಅದರಂತೆ ಇಂದು ದೇವಿಯ ದರ್ಶನ ಪಡೆದೆ. ಮನಸ್ಸಿಗೆ ಬಹಳ ನೆಮ್ಮದಿಯಾಯ್ತು. ದೇವಸ್ಥಾನವನ್ನು ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದರು.

ಅಳಿಯ ರಿಷಿ ಸುನಕ್​​ ಬ್ರಿಟನ್ ಪ್ರಧಾನಿಯಾಗಿದ್ದರ ಕುರಿತು ಪ್ರತಿಕ್ರಿಯಿಸಿದ ಸುಧಾಮೂರ್ತಿ, ಅವರಿಗೆ ನಮ್ಮ ಆಶೀರ್ವಾದ ಸದಾ ಇದ್ದೇ ಇರುತ್ತದೆ ಎಂದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಬೇರೆ ವಿಚಾರ ಮಾತನಾಡುವುದು ಬೇಡ ಎಂದು ನಗುತ್ತಾ ತೆರಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net