ಅಭಿಮಾನಿಗಳ ಮನದಲ್ಲಿ ಡಾ.ರಾಜ್​ ಎಂದೆಂದೂ ಅಮರ

Dr.Raj
Published on

ಶ್ರೀನಿವಾಸ್​ ರಾವ್​ ಕೆ. ಬಣ್ಣನೆ

ರಾಜಕುಮಾರ್​ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಚಲನಚಿತ್ರಗಳ ಮೂಲಕವೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ತನ್ನದೇ ಆದ ವಿಶೇಷ ಹಾಗೂ ಶ್ರೇಷ್ಠ ಕೊಡುಗೆ ನೀಡಿದ ಡಾ. ರಾಜ್​ಕುಮಾರ್​ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಅಮರ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ಹೇಳಿದರು.

ಉಡುಪಿಯ ಕಾತ್ಯಾಯಿನಿ ನಗರದಲ್ಲಿ ವೇದಿಕೆಯ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ರಾಜ್​ಕುಮಾರ್​ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಸ್ತ ಕನ್ನಡಿಗರ ಆಸ್ತಿ

ಗೋಕಾಕ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಕನ್ನಡದ ಬಗ್ಗೆ ಅವರಿಗಿದ್ದ ಕಳಕಳಿ ಅನಾವರಣಗೊಳಿಸಿದರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ಬೆಳಕಿಗೆ ಬಂದ ಡಾ. ರಾಜ್​, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಕಾಡುಗಳ್ಳ ವೀರಪ್ಪನ್​ ಅವರನ್ನು ಅಪಹರಿಸಿದ ಬಳಿಕ ಮಾನಸಿಕವಾಗಿ ಜರ್ಜರಿತರಾಗಿದ್ದರು. ಬಳಿಕ ಕೆಲ ವರ್ಷದಲ್ಲೇ ನಿಧನರಾದರು. ಅವರ ಜೀವನಾದರ್ಶ ಮಾದರಿಯಾಗಿದ್ದು, ಸಮಸ್ತ ಕನ್ನಡಿಗರ ಆಸ್ತಿಯಾಗಿದ್ದಾರೆ ಎಂದರು.

ಅನುರಾಧಾ ಜಿ.ಎಸ್​., ಗುಣವತಿ, ಹೇಮಲತಾ ಉಪಸ್ಥಿತರಿದ್ದರು.

ಸಂಘಟನೆಯ ಪ್ರಮುಖರಾದ ಸುರೇಶ ಡಿ., ಪ್ರೇಮಲತಾ, ಶಿವಾನಿ, ಶ್ರೀದೇವಿ, ಚಂದ್ರಶೇಖರ, ರಾಘವೇಂದ್ರ, ಲಕ್ಷ್ಮೀ, ವಿಜಯಲಕ್ಷ್ಮೀ, ರಮೇಶ, ವೀಣಾ, ಅನಂತ, ವಾಸು ಪೂಜಾರಿ, ಐಶ್ವರ್ಯಾ, ಉಮೇಶ ಎಂ., ರಾಮಕೃಷ್ಣ, ರಮಾನಂದ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net