ಡಾ.ಪ್ರಸನ್ನ ಕುಮಾರ್ ಶೆಟ್ಟಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ

mng-31aug-dr prasanna kumar
Published on


ಮಂಗಳೂರು : ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಕ್ಷೇಮ ಐವಿಎಫ್ ಫರ್ಟಿಲಿಟಿ ಅಂಡ್ ರಿಪ್ರೊಡಕ್ಟಿವ್ ಮೆಡಿಸಿನ್ ಸೆಂಟರ್‌ನ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ್ ಶೆಟ್ಟಿ ಅವರಿಗೆ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಐಎಸ್‌ಆರ್ 2024 ಸಮ್ಮೇಳನದಲ್ಲಿ ಪ್ರತಿಷ್ಠಿತ ಐಎಸ್‌ಎಆರ್ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಐಎಸ್‌ಆರ್ ಅಧ್ಯಕ್ಷೆ ಡಾ. ಅಮೀತ ಪಾಟ್ಕಿ, ಕಾರ್ಯದರ್ಶಿ ಡಾ. ಆಶಾಬಕ್ಷಿ, ಐಎಸ್‌ಎಆರ್ ಕರ್ನಾಟಕ ವಲಯದ ಅಧ್ಯಕ್ಷೆ ಡಾ. ನಿವೇದಿತಾಶೆಟ್ಟಿ ಮತ್ತು ಡಾ. ಮಂಜುನಾಥ್ ಉಪಸ್ಥಿತರಿದ್ದರು.
ಐಎಸ್‌ಎಆರ್ ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯಕವಾಗುವ ಐವಿಎಫ್ ಮತ್ತು ಸಂತಾನ ಹೀನತೆಯ ಕುರಿತಾದ ತಜ್ಞರು, ಸ್ತ್ರೀರೋಗ ತಜ್ಞರು, ಭ್ರೂಣ ತಜ್ಞರು ಮತ್ತು ಸಂಬಂಧಿತ ಬೇರೆ ವಿಷಯಗಳ ತಜ್ಞರ ಸಂಸ್ಥೆಯಾಗಿದೆ. ಈ ಸಂಸ್ಥೆಯು 25 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು ಭಾರತದಾದ್ಯಂತ 4110 ಸದಸ್ಯರಿದ್ದಾರೆ. ಸಂಸ್ಥೆಯು ಪ್ರತಿ ವಾರ್ಷಿಕ ಸಮ್ಮೇಳನಗಳಲ್ಲಿ ದ್ರೋಣಾಚಾರ್ಯ ಮತ್ತು ಯುವ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ಕ್ಷೇಮಾ ಐವಿಎಫ್ ಪ್ರಯೋಗಾಲಯವು 2013ರಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ಸಾವಿರಾರು ಮಕ್ಕಳಿಲ್ಲದ ದಂಪತಿಗೆ ಸಂತಾನ ಚಿಕಿತ್ಸೆಯನ್ನು ಒದಗಿಸಿ, ಸಂತೃಪ್ತ ಜೀವನ ಕನಸು ನನಸಾಗಲು ಕಾರಣವಾಗಿದೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿರುವ ಕೆ.ಎಸ್. ಹೆಗ್ಡೆಆಸ್ಪತ್ರೆಯು ಎಂಬ್ರಿಯಾಲಜಿಯಲ್ಲಿ ಎಂಎಸ್ಸಿ ಕೋರ್ಸ್ ಕೂಡ ನಡೆಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net