ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಸರ್ವಧರ್ಮದ ಏಳಿಗೆಗಾಗಿ ಶ್ರಮಿಸುವ ಸಾಮಾಜಿಕ ಹೋರಾಟಗಾರರಿಗೆ ನೀಡುವ 2023-24ನೇ ಸಾಲಿನ ರಾಜ್ಯಮಟ್ಟದ ‘ಸಾಧನಾ ಸದ್ಭಾವನಾ ಪುರಸ್ಕಾರ’ಕ್ಕೆ ಸಾಮಾಜಿಕ ಕಾರ್ಯಕರ್ತ ಡಾ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಯ್ಕೆಯಾಗಿದ್ದಾರೆ. ಪುರಸ್ಕಾರ 20 ಸಾವಿರ ರೂ., ಪಾರಿತೋಷಕ, ಪದಕ ಮತ್ತು ಗೌರವ ಸನ್ಮಾನಗಳನ್ನು ಒಳಗೊಂಡಿದೆ. ಪುರಸ್ಕಾರ ಪ್ರದಾನ ಸಮಾರಂಭ ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
