

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ) ಶಾಲೆಗೆ, ಜ್ಞಾನವಾಹಿನಿ ಎಂಬ ಶೀರ್ಷಿಕೆಯಲ್ಲಿ ಶುಭಾರಂಭಗೊಂಡಿರುವ ಸಂಚಾರಿ ಗ್ರಂಥಾಲಯ ಬಸ್‌ನಲ್ಲಿ ಭೇಟಿ ನೀಡಿದರು.
ಭೇಟಿಯ ವೇಳೆ ಶಾಲೆಯ ಮಕ್ಕಳೊಂದಿಗೆ ಪ್ರತಿ ತರಗತಿಗೂ ಭೇಟಿ ನೀಡಿ ಸಂವಾದ ನಡೆಸಿ, ಶಾಲಾ ಪ್ರಗತಿಪರ ಚಿಂತನೆಗಳನ್ನು ಹಂಚಿಕೊಂಡರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.