More

    ನೀವು ಈ ಐಪಿಒ ಖರೀದಿಸಿದ್ದರೆ ಒಂದೇ ದಿನದಲ್ಲಿ ನಿಮ್ಮ ಹಣ ದುಪ್ಪಟ್ಟು: ಈ ಷೇರು ಯಾವುದು ಗೊತ್ತೆ?

    ಮುಂಬೈ: ನ್ಯೂ ಸ್ವಾನ್ ಮಲ್ಟಿಟೆಕ್ ಕಂಪನಿಯು ಇಂಜಿನಿಯರಿಂಗ್ ಘಟಕಗಳು ಮತ್ತು ಭಾಗಗಳ ತಯಾರಕ ಸಂಸ್ಥೆಯಾಗಿದೆ. ಆಟೋಮೋಟಿವ್ ಉದ್ಯಮ ಮತ್ತು ಆಧುನಿಕ ಕೃಷಿ – ಈ ಎರಡು ವಲಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಇದು ತಯಾರಿಸುತ್ತದೆ.

    ಈ ಕಂಪನಿಯು ಈಗಷ್ಟೆ ಐಪಿಒ (ಇನಿಷಿಯಲ್​ ಪಬ್ಲಿಕ್​ ಆಫರ್​. ಒಂದು ಕಂಪನಿಯು ಷೇರು ಮಾರುಕಟ್ಟೆಗೆ ಪ್ರವೇಶಿಸುವ ಸಂದರ್ಭದಲ್ಲಿ ಆರಂಭಿಕವಾಗಿ ಷೇರುಗಳನ್ನು ಹೂಡಿಕೆದಾರರಿಗೆ ನೀಡಿ ಬಂಡವಾಳ ಕ್ರೋಡೀಕರಿಸುವ ಪ್ರಕ್ರಿಯೆ ಇದು.) ಮೂಲಕ ಷೇರು ಸಂಗ್ರಹಿಸಿದೆ. ಜನವರಿ 11 ರಿಂದ ಜನವರಿ 15 ರ ಅವಧಿಯಲ್ಲಿ ಐಪಿಒಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು.

    ಅಚ್ಚರಿಯ ಸಂಗತಿ ಎಂದರೆ, ಷೇರು ಮಾರುಕಟ್ಟೆ ಪ್ರವೇಶಿಸಿದ ಮೊದಲ ದಿನವೇ ಈ ಕಂಪನಿಯ ಷೇರುಗಳ ಬೆಲೆ ದುಪ್ಪಟ್ಟಾಗಿದೆ. ಈ ಐಪಿಒಗೆ ಬಲವಾದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ತಕ್ಷಣವೇ ಈ ಅದ್ಭುತ ಲಾಭ ಬಂದಿದೆ.

    ನ್ಯೂ ಸ್ವಾನ್ ಮಲ್ಟಿಟೆಕ್ ಷೇರುಗಳು ಗುರುವಾರದಂದು ಅದ್ಭುತವಾಗಿ ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿವೆ. ಏಕೆಂದರೆ ಸ್ಟಾಕ್ ಅನ್ನು ಐಪಿಒ ಬೆಲೆಗೆ ಹೆಚ್ಚುವರಿಯಾಗಿ ಶೇಕಡಾ 90ರಷ್ಟು ಪ್ರೀಮಿಯಂನಲ್ಲಿ ಪಟ್ಟಿ ಮಾಡಲಾಗಿದೆ. ಹೀಗಾಗಿ, ನ್ಯೂ ಸ್ವಾನ್ ಮಲ್ಟಿಟೆಕ್ ಷೇರಿನ ಬೆಲೆಯು ಬಿಎಸ್‌ಇ ಎಸ್‌ಎಂಇಯಲ್ಲಿನ ಬಿಡುಗಡೆಯ ಬೆಲೆಯಾದ 66 ರೂಪಾಯಿಗೆ ಹೋಲಿಸಿದರೆ 125.40 ರೂಪಾಯಿಯಲ್ಲಿ ಮಾರುಕಟ್ಟೆಯಲ್ಲಿ ಆರಂಭವಾಗಿದೆ.

    ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ನಂತರ, ನ್ಯೂ ಸ್ವಾನ್ ಮಲ್ಟಿಟೆಕ್ ಷೇರುಗಳ ಲಾಭವು ಹೆಚ್ಚಾಗಿದ್ದು, 5% ಅಪ್ಪರ್ ಸರ್ಕ್ಯೂಟ್‌ನಲ್ಲಿ 131.67 ರೂಪಾಯಿಗೆ ಲಾಕ್ ಮಾಡಲಾಗುತ್ತದೆ. ಈ ಬೆಲೆಯಲ್ಲಿ, ನ್ಯೂ ಸ್ವಾನ್ ಮಲ್ಟಿಟೆಕ್ ಐಪಿಒ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿದೆ.

    ನ್ಯೂ ಸ್ವಾನ್ ಮಲ್ಟಿಟೆಕ್ ಷೇರುಗಳು ಪಟ್ಟಿ ಮಾಡುವ ಮೊದಲು ಶೇಕಡಾ 80ರಷ್ಟು ಹೆಚ್ಚುವರಿ ಹಣಕ್ಕೆ ಗ್ರೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದವು.

    ಜನವರಿ 11 ರಿಂದ ಜನವರಿ 15 ರ ಅವಧಿಯಲ್ಲಿ ನ್ಯೂ ಸ್ವಾನ್ ಮಲ್ಟಿಟೆಕ್ ಐಪಿಒ ತೆರೆಯಲಾಗಿತ್ತು. ಆಗ ಈ ಐಪಿಒಗೆ ಬಲವಾದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ತಕ್ಷಣವೇ ಈ ಅದ್ಭುತ ಲಾಭ ಬಂದಿದೆ.

    ನ್ಯೂ ಸ್ವಾನ್ ಮಲ್ಟಿಟೆಕ್ ಐಪಿಒವನ್ನು ಖರೀದಿಗೆ 384.26 ಪಟ್ಟು ಬೇಡಿಕೆ ಬಂದಿತ್ತು.

    ನ್ಯೂ ಸ್ವಾನ್ ಮಲ್ಟಿಟೆಕ್ ಐಪಿಒ ಒಂದು ಎಸ್‌ಎಂಇ (ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ) ಐಪಿಒ ಆಗಿದ್ದು, 33.11 ಕೋಟಿ ರೂಪಾಯಿ ಬಂಡವಾಳ ಸಂಗ್ರಹದ ಗಾತ್ರವನ್ನು ಹೊಂದಿತ್ತು. ಈ ಐಪಿಒನಲ್ಲಿ 50.16 ಲಕ್ಷ ಷೇರುಗಳನ್ನು ವಿತರಿಸಲಾಗಿದೆ. ಪ್ರತಿ ಷೇರಿಗೆ 62 ರಿಂದ 66 ರೂಪಾಯಿವರೆಗೆ ಐಪಿಒ ಬೆಲೆಯನ್ನು ನಿಗದಿಪಡಿಸಲಾಗಿತ್ತು.

    ಮ್ಯೂಚುಯಲ್ ಫಂಡ್ ವಿತರಕರಿಗೆ ಆಮಿಷ: ಫಂಡ್​ ಹೌಸ್​ಗಳಿಗೆ ಸೆಬಿ ಎಚ್ಚರಿಕೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts