More

    ನೀವು 1 ಲಕ್ಷ ರೂ. ಹೂಡಿದ್ದರೆ ಈಗ ಶತಕೋಟ್ಯಧೀಶರಾಗುತ್ತಿದ್ದೀರಿ: ಭಾರತದ ಅತ್ಯಂತ ದುಬಾರಿ ಸ್ಟಾಕ್​ನ ಮಹಿಮೆ

    ಮುಂಬೈ: ಭಾರತದ ಅತ್ಯಂತ ದುಬಾರಿ ಸ್ಟಾಕ್ ಆಗಿ ಎಂಆರ್​ಎಫ್​ ಹೊರಹೊಮ್ಮಿದೆ. ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ
    ಎಂಆರ್​ಎಫ್​ನ ಒಂದು ಷೇರಿನ ಬೆಲೆ 1.5 ಲಕ್ಷ ರೂಪಾಯಿಯ ಗಡಿಯನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತು. ಆರಂಭದಲ್ಲಿ ಇದರಲ್ಲಿ ಹೂಡಿಕೆ ಮಾಡಿದವರು ಕೋಟ್ಯಧೀಶರು, ಶತಕೋಟ್ಯಧೀಶರು ಆಗಿದ್ದಾರೆ.

    MRF ಎಂದೇ ಜನಪ್ರಿಯವಾಗಿರುವ ಮದ್ರಾಸ್ ರಬ್ಬರ್ ಫ್ಯಾಕ್ಟರಿಯ ಷೇರುಗಳು ಬುಧವಾರದ ಮಧ್ಯಾಹ್ನದ ವಹಿವಾಟಿನಲ್ಲಿ ರೂ 1.5 ಲಕ್ಷ ಗಡಿಯನ್ನು ಮುಟ್ಟಿದವು. ಈ ಮೂಲಕ MRF ಅತ್ಯಂತ ದುಬಾರಿ ಭಾರತೀಯ ಸ್ಟಾಕ್ ಆಯಿತು. ಆದರೆ, ಇದಾದ ಸ್ವಲ್ಪ ಸಮಯದ ಹೊತ್ತಿನಲ್ಲಿಯೇ ಮಧ್ಯಾಹ್ನ 2 ಗಂಟೆಯ ವೇಳೆಗೆ ಈ ಸ್ಟಾಕ್ ರೂ 1,37,711 ನಲ್ಲಿ ವಹಿವಾಟು ನಡೆಸಿತು.

    ಕಳೆದೊಂದು ವರ್ಷದಲ್ಲಿ ಎಂಆರ್​ಎಫ್​ ಷೇರುಗಳ ಬೆಲೆ ಶೇಕಡಾ 53ರಷ್ಟು ಹೆಚ್ಚಳ ಕಂಡಿವೆ. ಅಂದರೆ, ಅಂದಾಜು 48,000 ರೂಪಾಯಿ ಹೆಚ್ಚಳವಾಗಿದೆ..

    MRF ಷೇರುಗಳನ್ನು ಹೊರತುಪಡಿಸಿ, ಪೇಜ್ ಇಂಡಸ್ಟ್ರೀಸ್ (ರೂ. 37,770), ಹನಿವೆಲ್ ಆಟೋಮೇಷನ್ ಇಂಡಿಯಾ (ರೂ. 37,219), 3M ಇಂಡಿಯಾ (ರೂ.34,263) ಮತ್ತು ಶ್ರೀ ಸಿಮೆಂಟ್ (ರೂ.26,527) ಭಾರತದ ಇತರ ಅತಿ ಹೆಚ್ಚು ಬೆಲೆಯ ಷೇರುಗಳಾಗಿವೆ.

    ಕಳೆದ 15 ವರ್ಷಗಳ ಪೈಕಿ 11 ವರ್ಷಗಳಲ್ಲಿ ಎಂಆರ್​ಎಫ್​ ಸ್ಟಾಕ್ ಸಕಾರಾತ್ಮಕ ಕಾರ್ಯಕ್ಷಮತೆ ತೋರಿದೆ. 2013-14ನೇ ಹಣಕಾಸು ವರ್ಷದಲ್ಲಿ ಶೇಕಡಾ 96 ರಷ್ಟು ಏರಿಕೆ ಕಂಡಿತ್ತು. ನಂತರ 2016-17ರಲ್ಲಿ ಶೇಕಡಾ 48ರಷ್ಟು ಹೆಚ್ಚಳವಾಗಿತ್ತು. ಈ 15 ವರ್ಷಗಳ ಅವಧಿಯಲ್ಲಿ ಈ ಸ್ಟಾಕ್ 5,588 ಪ್ರತಿಶತದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಅಂದರೆ, ಪ್ರತಿ ಷೇರಿನ ಬೆಲೆಯು 2003 ರೂಪಾಯಿಯಿಂದ ಪ್ರಸ್ತುತ ಬೆಲೆಯಾದ 1,37,650 ಕ್ಕೆ ಏರಿದೆ.

    ಎಂಆರ್​ಎಫ್​ (ಮದ್ರಾಸ್ ರಬ್ಬರ್ ಫ್ಯಾಕ್ಟರಿ), ಪ್ರತಿ ಷೇರಿಗೆ 10 ರೂ ಮುಖಬೆಲೆಯೊಂದಿಗೆ ಸಾರ್ವಜನಿಕ ಕಂಪನಿಯಾಗಿ 1993ರ ಏಪ್ರಿಲ್​ನಲ್ಲಿ ಪದಾರ್ಪಣೆ ಮಾಡಿತು. ಕಳೆದ 30 ವರ್ಷಗಳಲ್ಲಿ ಹೂಡಿಕೆದಾರರಿಗೆ ಈ ಕಂಪನಿಯ ಷೇರುಗಳು 13,76,500% ಲಾಭ ತಂದುಕೊಟ್ಟಿವೆ. ಒಂದು ವೇಳೆ ನೀವು ಅಂದು ಇದರಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಅದು ಈಗ 1,37,65,00,000 ರೂಪಾಯಿಗೆ (1 ಕೋಟಿ 37 ಲಕ್ಷ 65 ಸಾವಿರ ರೂಪಾಯಿ) ಹೆಚ್ಚಳವಾಗುತ್ತಿತ್ತು.

    MRF ಷೇರುಗಳು ವರ್ಷಗಳಲ್ಲಿ ಹೂಡಿಕೆದಾರರಿಗೆ ಬಹು ಪಟ್ಟು ಆದಾಯವನ್ನು ನೀಡಿವೆ. ಹೂಡಿಕೆದಾರರು 25 ವರ್ಷಗಳ ಹಿಂದೆ MRF ಷೇರುಗಳಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ, 2018 ರ ಏಪ್ರಿಲ್ 30 ರಂದು ಸ್ಟಾಕ್ ಗರಿಷ್ಠವಾಗಿದ್ದಾಗ ಕಾರ್ಪಸ್ 74.02 ಕೋಟಿ ರೂ

    1946ರಲ್ಲಿ ಚೆನ್ನೈನಲ್ಲಿ ಆರಂಭವಾದ ಈ ಟೈರ್​ ತಯಾರಿಕೆ ಕಂಪನಿಯಾದ ಎಂಆರ್‌ಎಫ್‌ ವಿಶ್ವದ 75 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.

    ಈ ಕಂಪನಿಯನ್ನು 1946 ರಲ್ಲಿ ಮದ್ರಾಸಿನ ತಿರುವೊಟ್ಟಿಯೂರಿನಲ್ಲಿ ಕೆ.ಎಂ.ಮಮ್ಮೆನ್ ಮಾಪಿಳ್ಳೈ ಅವರು ಆಟಿಕೆ ಬಲೂನ್ ಉತ್ಪಾದನಾ ಘಟಕವಾಗಿ ಪ್ರಾರಂಭಿಸಿದರು. 1952ರಲ್ಲಿ, ಕಂಪನಿಯು ಚಕ್ರದ ಹೊರಮೈಯಲ್ಲಿರುವ ರಬ್ಬರ್ ತಯಾರಿಕೆಯಲ್ಲಿ ತೊಡಗಿತು. ಮದ್ರಾಸ್ ರಬ್ಬರ್ ಫ್ಯಾಕ್ಟರಿ ಲಿಮಿಟೆಡ್ ಅನ್ನು ನವೆಂಬರ್ 1960 ರಲ್ಲಿ ಖಾಸಗಿ ಕಂಪನಿಯಾಗಿ ಸಂಯೋಜಿಸಲಾಯಿತು. ಅಮೆರಿಕ ಮೂಲದ ಮ್ಯಾನ್ಸ್‌ಫೀಲ್ಡ್ ಟೈರ್ ಮತ್ತು ರಬ್ಬರ್ ಕಂಪನಿಯ ಸಹಭಾಗಿತ್ವದಲ್ಲಿ ಟೈರ್‌ಗಳ ತಯಾರಿಕೆಯಲ್ಲಿ ತೊಡಗಿತು. 1967 ರಲ್ಲಿ, ಇದು ಅಮರಿಕಕ್ಕೆ ಟೈರ್ ರಫ್ತು ಮಾಡಿದ ಮೊದಲ ಭಾರತೀಯ ಕಂಪನಿಯಾಯಿತು. ಇಂದು, ಕಂಪನಿಯು ಟೈರ್‌ಗಳು, ಟ್ರೆಡ್‌ಗಳು, ಟ್ಯೂಬ್‌ಗಳು ಮತ್ತು ಕನ್ವೇಯರ್ ಬೆಲ್ಟ್‌ಗಳು, ಬಣ್ಣಗಳು, ಆಟಿಕೆಗಳು (ಫನ್‌ಸ್ಕೂಲ್) ಮತ್ತು ಕ್ರಿಕೆಟ್ ಬ್ಯಾಟ್‌ಗಳನ್ನು ಒಳಗೊಂಡಂತೆ ರಬ್ಬರ್ ಉತ್ಪನ್ನಗಳನ್ನು ತಯಾರಿಸುತ್ತದೆ.

    ಷೇರು ಮಾರುಕಟ್ಟೆ ಮತ್ತೆ ಕುಸಿತ: ಮೂರೇ ದಿನಗಳಲ್ಲಿ ಶೇಕಡಾ 3ರಷ್ಟು ನಷ್ಟವಾಗಿದ್ದೇಕೆ?

    ರೂ. 362 ಕೋಟಿಯ ಆರ್ಡರ್​: 1,025.56% ಲಾಭ ನೀಡಿದ ಕೇಬಲ್​ ಕಂಪನಿಯ ಷೇರು ಡಬಲ್​ ಆಗುವ ನಿರೀಕ್ಷೆ

    400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts