More

    ಮ್ಯೂಚುಯಲ್ ಫಂಡ್ ವಿತರಕರಿಗೆ ಆಮಿಷ: ಫಂಡ್​ ಹೌಸ್​ಗಳಿಗೆ ಸೆಬಿ ಎಚ್ಚರಿಕೆ ನೀಡಿದ್ದೇಕೆ?

    ಮುಂಬೈ: ಭಾರತೀಯ ಷೇರು ಮತ್ತು ವಿನಿಮಯ ಮಂಡಳಿಯು (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ – ಸೆಬಿ) ಕೆಲ ಮ್ಯೂಚುವಲ್​ ಫಂಡ್​ ಹೌಸ್​ಗಳಿಗೆ ಎಚ್ಚರಿಕೆಯನ್ನು ನೀಡಿದೆ.

    ಕೆಲವು ಮ್ಯೂಚುವಲ್​ ಫಂಡ್ ಹೌಸ್‌ಗಳು ತಮ್ಮ ಫಂಡ್​ಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ
    ಮ್ಯೂಚುಯಲ್ ಫಂಡ್ ವಿತರಕರಿಗೆ (ಮ್ಯೂಚುವಲ್​ ಫಂಡ್​ ಡಿಸ್ಟ್ರಿಬ್ಯೂಟರ್​ – ಎಂಎಫ್‌ಡಿ) ಪ್ರಾಯೋಜಿತ ಪ್ರವಾಸಗಳ ಆಮಿಷಗಳನ್ನು ಒಡ್ಡುತ್ತವೆ. ಇಂತಹ ಅಭ್ಯಾಸಗಳಿಂದ ದೂರವಿರುವಂತೆ ಸೆಬಿಯು ಎಚ್ಚರಿಕೆ ನೀಡಿದೆ.
    ಭಾರತೀಯ ಮ್ಯೂಚುಯಲ್ ಫಂಡ್‌ಗಳ ಸಂಘಕ್ಕೆ (Amfi) ಈ ಕುರಿತು ಮಾಹಿತಿಯನ್ನು ಸೆಬಿ ರವಾನಿಸಿದೆ. ಕಳೆದ 10 ತಿಂಗಳಲ್ಲಿ ಎರಡನೇ ಬಾರಿಗೆ ಇಂತಹ ಎಚ್ಚರಿಕೆಯನ್ನು ಸೆಬಿ ನೀಡಿದೆ,

    “ಕೆಲವು ಅಸೆಟ್​ ಮ್ಯಾನೇಜ್​ಮೆಂಟ್​ ಕಂಪನಿಗಳು (AMC, ಅಂದರೆ ಮ್ಯೂಚುವಲ್​ ಫಂಡ್​ ಕಂಪನಿಗಳು) ಪ್ರಚಾರ ಮತ್ತು ಸ್ಪರ್ಧೆ ನಡೆಸುತ್ತಿರುವಂತೆ ತೋರುತ್ತಿದೆ. ಮ್ಯೂಚುಯಲ್ ಫಂಡ್ ವಿತರಕರಿಗೆ (ಎಂಎಫ್​ಡಿ) ಕಮಿಷನ್​ ನೀಡುವುದರ ಹೊರತಾಗಿ, ಪ್ರೋತ್ಸಾಹ ಅಥವಾ ಬಹುಮಾನದ ಪ್ರವಾಸಗಳನ್ನು ನೀಡಲಾಗುತ್ತಿದೆ ಎಂದು ಸೆಬಿ ನಮ್ಮ ಗಮನಕ್ಕೆ ತಂದಿದೆ” ಎಂದು ಅಂಫಿ ಹೇಳಿದೆ.

    ಕಮಿಷನ್‌ಗಳನ್ನು ಹೊರತುಪಡಿಸಿ ಯಾವುದೇ ವಿಧಾನದಿಂದ ಮ್ಯೂಚುಯಲ್ ಫಂಡ್ ವಿತರಕರನ್ನು ಪ್ರೋತ್ಸಾಹಿಸಲು ನಿಯಮಗಳು ಅನುಮತಿಸುವುದಿಲ್ಲ. ಆದಾಗ್ಯೂ, ಕೆಲವು ಮ್ಯೂಚುವಲ್​ ಫಂಡ್ ಹೌಸ್‌ಗಳು ‘ತರಬೇತಿ ಕಾರ್ಯಕ್ರಮಗಳ’ ಅಡಿಯಲ್ಲಿ ಮ್ಯೂಚುಯಲ್ ಫಂಡ್ ವಿತರಕರಿಗೆ ಪ್ರವಾಸಗಳನ್ನು ಆಯೋಜಿಸುತ್ತಿವೆ. ನಿರ್ದಿಷ್ಟ ಮಾರಾಟದ ಗುರಿಗಳ ಸಾಧನೆಯ ಆಧಾರದ ಮೇಲೆ ಇಂತಹ ಪ್ರವಾಸಗಳ ಮೂಲಕ ಮ್ಯೂಚುಯಲ್ ಫಂಡ್ ವಿತರಕರನ್ನು ಪ್ರೋತ್ಸಾಹಿಸುವುದು ಸೆಬಿ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು, ಇಂತಹ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಹಿಂತೆಗೆದುಕೊಳ್ಳುವಂತೆ ಮ್ಯೂಚುವಲ್​ ಫಂಡ್​ ಕಂಪನಿಗಳಿಗೆ ತಿಳಿಸಲಾಗುವುದು ಎಂದು ಅಂಫಿ ಹೇಳಿದೆ.

    ಮ್ಯೂಚುಯಲ್ ಫಂಡ್ ವಿತರಕರಿಗೆ ಇಂತಹ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವುದನ್ನು ಸೆಬಿ ಸಹಿಸುವುದಿಲ್ಲ. ಏಕೆಂದರೆ, ಇಂತಹ ಆಮಿಷವು ತಪ್ಪು ಮಾರಾಟಕ್ಕೆ ಕಾರಣವಾಗಬಹುದು.

    2018 ರಲ್ಲಿ ಕೂಡ ಸೆಬಿಯು, ವಿತರಕರಿಗೆ ಯಾವುದೇ ಬಹುಮಾನ ಅಥವಾ ನಗದುರಹಿತ ಪ್ರೋತ್ಸಾಹವನ್ನು ನೀಡಲು ತರಬೇತಿ ಕಾರ್ಯಕ್ರಮಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅದು ಸುತ್ತೋಲೆಯನ್ನು ಬಿಡುಗಡೆ ಮಾಡಿತ್ತು.

    ಏಪ್ರಿಲ್ 2023 ರಲ್ಲಿ, ಇಂತಹ ಪ್ರೋತ್ಸಾಹಕ ಕಾರ್ಯಕ್ರಮಗಳು ಬೆಳಕಿಗೆ ಬಂದ ನಂತರ ಅಂಫಿಯು ಮ್ಯೂಚುವಲ್​ ಫಂಡ್ ಕಂಪನಿಗಳಿಗೆ ಇದೇ ರೀತಿಯ ಪತ್ರವನ್ನು ಬರೆದಿತ್ತು.

    ಕೋವಿಡ್ ನಂತರ ‘ನೇರ’ ಹೂಡಿಕೆಗೆ ಮ್ಯೂಚುವಲ್​ ಫಂಡ್​ಗಳಲ್ಲಿ ಅವಕಾಶ ಕಲ್ಪಿಸಿದ್ದರೂ ಮ್ಯೂಚುವಲ್​ ಫಂಡ್​ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೂಡಿಕೆದಾರರಿಗೆ ಬಳಿ ಕೊಂಡೊಯ್ಯಲು ಮ್ಯೂಚುವಲ್​ ಫಂಡ್​ ವಿತರಕರ ಮೇಲೆ ಹೆಚ್ಚು ಅವಲಂಬಿತವಾಗಿವೆ.

    ಜನ್ಮ ದಿನಾಂಕಕ್ಕೆ ಪುರಾವೆಯಾಗದು ಆಧಾರ್​ ಕಾರ್ಡ್​: ಹಾಗಿದ್ದರೆ ನೀವು ನೀಡಬೇಕಾದ ಬೇರೆ ದಾಖಲೆಗಳೇನು?

    ಷೇರು ಮಾರುಕಟ್ಟೆ ಮತ್ತೆ ಕುಸಿತ: ಮೂರೇ ದಿನಗಳಲ್ಲಿ ಶೇಕಡಾ 3ರಷ್ಟು ನಷ್ಟವಾಗಿದ್ದೇಕೆ?

    ರೂ. 362 ಕೋಟಿಯ ಆರ್ಡರ್​: 1,025.56% ಲಾಭ ನೀಡಿದ ಕೇಬಲ್​ ಕಂಪನಿಯ ಷೇರು ಡಬಲ್​ ಆಗುವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts