

ಕೋಟ: ಕೃಷಿ ಉತ್ಪಾದನೆ ಹೆಚ್ಚಳವಾಗುವ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು. ಕೃಷಿಯಿಂದ ಆದಾಯವೂ ದ್ವಿಗುಣಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗುದ್ಯಾಳ್ ನುಡಿದರು.
ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕೃತಿ ಸಂಭ್ರಮ ಟ್ರಸ್ಟ್, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್, ಕೋಟ ಸಹಕಾರಿ ವ್ಯವಸಾಯಕ ಸಂಘದ ಸಹಯೋಗದಲ್ಲಿ ನಡೆದ ಮೂರು ದಿನಗಳ ಹಲಸು ಮತ್ತು ಮಾವು ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಾಧಕರಾದ ಒಳಮಾಡು ಆನಂದ ಮರಕಾಲ, ಚಂದ್ರಶೇಖರ್ ಗಾಣಿಗ, ನಿಶಾ ದೇವಾಡಿಗ ಬೇಳೂರು ಅವರನ್ನು ಗೌರವಿಸಲಾಯಿತು.
ಶ್ರೀಧರ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸತೀಶ್ ಕುಂದರ್, ಟಿ.ಮಂಜುನಾಥ್ ಗಿಳಿಯಾರು, ಕೃಷ್ಣ ಪೂಜಾರಿ ಪಿ, ಶ್ರಾವಿತ್ ಎನ್.ಶೆಟ್ಟಿ, ಇಬ್ರಾಹಿಂ ಬ್ಯಾರಿ, ಸತೀಶ್ ಕುಮಾರ್ ಉಪಸ್ಥಿತರಿದ್ದರು. ರಮೇಶ್ ಮೆಂಡನ್ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಕಾರ ನೀಡಿದವು.