

ಬೆಂಗಳೂರು: ಮೆಟ್ರೋ ರೈಲು ಯೋಜನೆ ಹಂತ-3ರಲ್ಲಿ ಬಿಎಂಆರ್‌ಸಿಎಲ್‌ನಿಂದ ಎರಡು ಕಾರಿಡಾರ್‌ಗಳಲ್ಲಿ 34.121 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ 4 ಪಥದ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದ ವರೆಗೆ ಹೊರವರ್ತುಲ ರಸ್ತೆ (ಓಆರ್‌ಆರ್) ಪಶ್ಚಿಮ ಮಾರ್ಗದ ವರೆಗೆ 28.486 ಕಿ.ಮೀ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆ ವರೆಗೆ 8.635 ಕಿ.ಮೀ ಕಾಮಗಾರಿ ಕೈಗೊಳ್ಳಲು ಸರ್ಕಾರ ಅನುಮೋದನೆ ನೀಡಿದೆ.
ಡಬಲ್ ಡೆಕ್ಕರ್ ಯೋಜನೆ ಎತ್ತರಿಸಿದ ರಸ್ತೆಯ ನಿರ್ಮಾಣದ ಅಂದಾಜು ವೆಚ್ಚ ಭೂಸ್ವಾಧೀನ ವೆಚ್ಚ, ಸಾಮಾನ್ಯ ಶುಲ್ಕ, ವಿನ್ಯಾಸ ಶುಲ್ಕಗಳು ಮತ್ತು ಆಕಸ್ಮಿಕ ವೆಚ್ಚಗಳು ಸೇರಿದಂತೆ ಲೂಪ್‌ಗಳು ಮತ್ತು ಇಳಿಜಾರುಗಳು ಸೇರಿದಂತೆ 9,700 ಕೋಟಿ ರೂ. ಅಂದಾಜು ಮಾಡಲಾಗಿದೆ.
ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಲಾದ 4 ಸಾವಿರ ಕೋಟಿ ರೂ. ಅನುದಾನದ ಮೂಲಕ ಯೋಜನೆ ವೆಚ್ಚವನ್ನು ಸಂಪೂರ್ಣ ಭರಿಸುತ್ತದೆ. ಭವಿಷ್ಯದಲ್ಲಿ ಇದೇ ರೀತಿಯ ಅನುದಾನ ನೀಡಲು ಸರ್ಕಾರ ನಿರ್ಧಾರಕ್ಕೆ ಬಂದಿದೆ.
ಯೋಜನೆಯಿಂದ ಯಾವುದೇ ರಸ್ತೆ ಮತ್ತು ಸೇತುವೆ, ಮೇಲ್ಸೇತುವೆಗಳನ್ನು ತೆರವು ಮಾಡುವುದಿಲ್ಲ. ಬದಲಿಗೆ ಪ್ರಸ್ತುತ ಇರುವ ರಸ್ತೆ, ಕೆಳಸೇತುವೆ, ಮೇಲ್ಸೇತುವೆಗಳನ್ನು ಉಳಿಸಿಕೊಂಡು ಜತೆಗೆ ಎತ್ತರಿಸಿದ ್ಲೈಓವರ್‌ನಲ್ಲಿ ಪ್ರತಿ ದಿಕ್ಕಿನಲ್ಲಿ 2 ಲೇನ್ ರಸ್ತೆಯನ್ನು ಒಳಗೊಂಡಂತೆ 4 ಲೇಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕೆಳಕಂಡ 2 ಕಾರಿಡಾರ್‌ಗಳಲ್ಲಿ 37.121 ಕಿ.ಮೀ ಉದ್ದಕ್ಕೂ ಎತ್ತರಿಸಿದ ರಸ್ತೆ ಮಾರ್ಗದೊಂದಿಗೆ ಡಬಲ್ ಡೆಕ್ಕರ್ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಮೆಟ್ರೋ ರೈಲು ನಿಗಮ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
37.121 ಕಿ.ಮೀಟರ್ ಕಾರಿಡಾರ್‌ನಲ್ಲಿ ್ಲೈಓವರ್ ವೆಚ್ಚದಲ್ಲಿ ಹೆಚ್ಚುವರಿ ಎತ್ತರ ನಿರ್ಮಿಸಿದ ಪಿಲ್ಲರ್, ಹೆಚ್ಚುವರಿ ಪೋರ್ಟಲ್‌ಗಳು, ರಾಂಪ್‌ಗಳು, ಸಾಮಾನ್ಯ ಶುಲ್ಕ, ವಿದ್ಯಾಸ ಶುಲ್ಕ ಮತ್ತು ಇತರೆ ವೆಚ್ಚವೆಂದು 179.65 ಕೋಟಿ ರೂ. ಖರ್ಚಾಗಲಿದೆ. ಹೆಚ್ಚುವರಿ ಭೂ ಸ್ವಾಧೀನಕ್ಕೆ 81.45 ಕೋಟಿ ರೂ. ಮತ್ತು ಒಟ್ಟು ವೆಚ್ಚ ್ಲೈಓವರ್ ಮತ್ತು ಲೂಪ್ಸ್‌ಗಳಿಗೆ 261.10 ಕೋಟಿ ರೂ. ಸೇರಿದಂತೆ 9,700 ಕೋಟಿ ರೂ. ಅಂದಾಜು ಮೊತ್ತ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.