ಹಾವು ಸತ್ತ ಸ್ಥಳದಲ್ಲಿ ಓಡಾಡಬೇಡಿ..ಅಪ್ಪಿತಪ್ಪಿ ಹೆಜ್ಜೆ ಹಾಕಿದರೆ, ನಿಮ್ಮ ಪ್ರಾಣ ಹೋಗುವುದು ಖಂಡಿತ!Snake

Snake
Published on

Snake: ಹಾವನ್ನು ಕಂಡರೆ ಯಾರಿಗೆ ಭಯವಾಗಲ್ಲ ಹೇಳಿ. ನಾವು ನಡೆದಾಡುವಾಗ ಆಕಸ್ಮಿಕವಾಗಿ ಕಾಲಡಿಯಲ್ಲಿ ಹಾವನೆನ್ನಾದರೂ ಕಂಡರೆ ಅಥವಾ ತುಳಿದರೆ ಮುಗಿತು ಅಷ್ಟೆ, ಕಿರುಚಾಡಿ, ಕೂಗಾಡಿ ದಿಕ್ಕಾಪಾಲಾಗಿ ಓಡುತ್ತೇವೆ. ಅಲ್ಲದೆ ಈ ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಪಡೆದರೆ ಬಚಾವ್​​ ಇಲ್ಲ ಅಂದರೆ ಜೀವಕ್ಕೆ ಅಪಾಯ  ಖಂಡಿತ. ಜೀವಂತ ಹಾವಷ್ಟೆ ನಿಮ್ಮ ಪ್ರಾಣಕ್ಕೆ ಅಪಾಯ ತರುವುದಷ್ಟೆ ಅಲ್ಲ, ಅದು ಸತ್ತ ನಂತರವೂ ನಿಮ್ಮ ಜೀವವನ್ನು ತೆಗೆಯುವ ಶಕ್ತಿಯಿದೆ. ಅದು ಹೇಗೆ ಗೊತ್ತಾ? ಬನ್ನಿ ತಿಳಿಯೋಣ.

ಶತಮಾನಗಳಿಂದ ಹಾವುಗಳ ಬಗ್ಗೆ ವಿವಿಧ ನಂಬಿಕೆಗಳು ಮತ್ತು ಕಥೆಗಳು ನಮ್ಮ ಸುತ್ತಲೂ ಹರಡುತ್ತಿವೆ. ಹಾವಿನ ಮೂಳೆಗಳಲ್ಲಿಯೂ ವಿಷವಿದೆ ಎಂದು ಕೆಲವರು ನಂಬುತ್ತಾರೆ ಮತ್ತು ಯಾರಾದರೂ ಆಕಸ್ಮಿಕವಾಗಿ ಅದರ ಮೇಲೆ ಕಾಲಿಟ್ಟರೆ ಅವರ ಸಾವು ಖಚಿತ ಎಂದು ನಂಬುತ್ತಾರೆ. ಆದರೆ ಈ ಕಥೆಯಲ್ಲಿ ಎಷ್ಟು ಸತ್ಯವಿದೆ? ಹಾವುಗಳನ್ನು ಉಳಿಸಲು ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸಲು ವರ್ಷಗಳಿಂದ ಕೆಲಸ ಮಾಡುತ್ತಿರುವ ಉರಗ ಸ್ನೇಹಿತರು ಏನು ಹೇಳುತ್ತಾರೆ ಗೊತ್ತಾ?

ಹಾವಿನ ಮೂಳೆಗಳಲ್ಲಿ ವಿಷವಿದೆ ಎಂಬ ನಂಬಿಕೆ ಸಂಪೂರ್ಣವಾಗಿ ತಪ್ಪು ಎಂದು ಉರಗ ಸ್ನೇಹಿಗಳು ಹೇಳುತ್ತಾರೆ. ವಾಸ್ತವವಾಗಿ, ಹಾವಿನ ವಿಷವು ಅದರ ತಲೆಯ ಬಳಿ ಇರುವ ಅದರ ವಿಷ ಗ್ರಂಥಿಗಳಲ್ಲಿ ಮಾತ್ರ ಇರುತ್ತದೆ.

ಇದು ಯಾರನ್ನಾದರೂ ಕಚ್ಚಿದಾಗ, ಈ ವಿಷವು ಅದರ ವಿಶೇಷ ಮುಂಭಾಗದ ಹಲ್ಲುಗಳಾದ ಕೋರೆಹಲ್ಲುಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಆದರೆ ಹಾವಿನ ಮಾಂಸ ಅಥವಾ ಮೂಳೆಗಳಲ್ಲಿ ವಿಷವಿಲ್ಲ.

ಸತ್ತ ಹಾವು ಅಪಾಯಕಾರಿ

ಆದರೂ ಉರಗ ಸ್ನೇಹಿಗಳು ಒಂದು ಪ್ರಮುಖ ಎಚ್ಚರಿಕೆಯನ್ನು ನೀಡುತ್ತಾರೆ. ಅದೆನೆಂದರೆ ಒಬ್ಬ ವ್ಯಕ್ತಿಯು ಆಕಸ್ಮಿಕವಾಗಿ ಸತ್ತ ಹಾವಿನ ವಿಷಕಾರಿ ಕೋರೆಹಲ್ಲುಗಳ ಮೇಲೆ ಕಾಲಿಟ್ಟರೆ ಮತ್ತು ವಿಷವು ಅದರಲ್ಲಿ ಉಳಿದರೆ, ಅದು ಅಪಾಯಕಾರಿ.

ಹಲವು ಬಾರಿ ವಿಷವು ಸತ್ತ ಹಾವಿನ ಹಲ್ಲುಗಳಲ್ಲಿ ಉಳಿಯುತ್ತದೆ, ಅದು ಚರ್ಮದ ಸಂಪರ್ಕಕ್ಕೆ ಬಂದಾಗ ದೇಹವನ್ನು ಪ್ರವೇಶಿಸಬಹುದು.

ವಿಷಕಾರಿಯಲ್ಲದ ಹಾವಿನ ಹಲ್ಲುಗಳು

ಹಾವು ಕಚ್ಚಿದ ನಂತರ ಎರಡು ಗುರುತುಗಳಿದ್ದರೆ, ಆ ಹಾವು ತುಂಬಾ ವಿಷಕಾರಿ ಎಂದು ಮತ್ತು ಎರಡಕ್ಕಿಂತ ಹೆಚ್ಚು ಗುರುತುಗಳ ಜೊತೆಗೆ ಹಲವಾರು ಗೀರುಗಳಿದ್ದರೆ, ಅದು ಸಾಮಾನ್ಯ ಮತ್ತು ವಿಷಕಾರಿಯಲ್ಲದ ಹಾವಾಗಿರಬಹುದು.

ಭಾರತದ ಕೆಲವು ಭಾಗಗಳಲ್ಲಿ ಮತ್ತು ಪ್ರಪಂಚದ ಅನೇಕ ದೇಶಗಳಲ್ಲಿ ಹಾವಿನ ಮಾಂಸವನ್ನು ತಿನ್ನುತ್ತಾರೆ ಹೀಗಾಗಿ ಹಾವಿನ ಮಾಂಸ ಅಥವಾ ಮೂಳೆಗಳಲ್ಲಿ ವಿಷವಿಲ್ಲ ಎಂದು ಸಾಬೀತಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net