2021ಕ್ಕೆ ಸ್ಟಾರ್ಸ್ ಸ್ವಾಗತ| ಈ ಸಲ ಪ್ರವಾಸ ಮಿಸ್ ಮಾಡಲ್ಲ..

Shanvi Edited
Published on

ಕರೊನಾದಿಂದಾಗಿ 2020 ಯಾವಾಗ ಮುಗಿಯುತ್ತದೋ ಎಂದುಕೊಂಡರೇ ಹೆಚ್ಚು. ಇದೀಗ 2021ಕ್ಕೆ ಪದಾರ್ಪಣೆ ಮಾಡಿದ್ದೇವಾದರೂ ಕರೊನಾ ಭಯ ಇದ್ದೇ ಇದೆ. ಹೀಗಿರುವಾಗ ಆ ವರ್ಷ ಮತ್ತು ಈ ವರ್ಷದ ಬಗ್ಗೆ ನಟ ಗಣೇಶ್, ಶ್ರೀಮುರಳಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

2020 ಎಲ್ಲರ ಪಾಲಿಗೆ ತುಂಬ ಕರಾಳವಾದ ವರ್ಷ. ಒಳ್ಳೇ ಸುದ್ದಿಗಳಿಗಿಂತ ಕರೊನಾ ಸುದ್ದಿಯೇ ಸದ್ದು ಮಾಡಿತ್ತು. ಸಿನಿಮಾ ಕ್ಷೇತ್ರವೇ ತಣ್ಣಗಾದ ಹಿನ್ನೆಲೆಯಲ್ಲಿ ಏಳೆಂಟು ತಿಂಗಳು ಕೆಲಸವಿರಲಿಲ್ಲ. ಈ ಮೊದಲೆಲ್ಲ ವರ್ಷದ 200 ದಿನಗಳನ್ನು ನಾನು ಟ್ರಾವೆಲಿಂಗ್ ಮಾಡುವುದರಲ್ಲಿಯೇ ಕಳೆಯುತ್ತಿದ್ದೆ. 2020 ಮಾತ್ರ ಮನೆಯಲ್ಲಿಯೇ ಕೂರಿಸಿತು. 2021ರಲ್ಲಿ ಸಿನಿಮಾ ಸಂಬಂಧಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದೇನೆ. ಜತೆಗೆ 2020ರಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಆ ತಪು್ಪಗಳು ಈ ವರ್ಷ ಆಗದಂತೆ ಎಚ್ಚರ ವಹಿಸಿ ಹೆಜ್ಜೆ ಇಡಬೇಕಿದೆ. ಧನಾತ್ಮಕ ಚಿಂತನೆಗಳಿಗೆ ಒತ್ತು ನೀಡಿ, ಆರೋಗ್ಯದ ಕಡೆಗೂ ಗಮನ ಹರಿಸಲಿದ್ದೇನೆ. ಎಲ್ಲವೂ ಮತ್ತಷ್ಟು ತಿಳಿಯಾದರೆ, ನನ್ನ ಟ್ರಾವೆಲಿಂಗ್ ಮುಂದುವರಿಯಲಿದೆ. ಕಳೆದ ವರ್ಷ ಒಂದೂ ಸಿನಿಮಾ ಬಿಡುಗಡೆ ಆಗಲಿಲ್ಲ ಎಂಬುದಕ್ಕೆ ನನಗೆ ಬೇಸರವಿಲ್ಲ. ಹೊಸ ವರ್ಷಕ್ಕೆ ಹೊಸ ಹೊಸ ಸಿನಿಮಾ ಅವಕಾಶಗಳು ಸಿಗುತ್ತಿವೆ. ಹಾಗಾಗಿ ಸಿಕ್ಕಿದ್ದರಲ್ಲಿಯೇ ಖುಷಿ ಕಾಣುವುದು ನನಗಿಷ್ಟ.

| ಶಾನ್ವಿ ಶ್ರೀವಾಸ್ತವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net