ಕಾವೇರಿ ಜಲವಿವಾದ; ಮಹತ್ವದ ಸಲಹೆ ಕೊಟ್ಟ ಸದ್ಗುರು

sadhguru
Published on

ಬೆಂಗಳೂರು: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಯಬೇಕೆಂದರೆ ನದಿ ಕೊಳ್ಳದಲ್ಲಿ ವ್ಯಾಪಕ ಗಿಡ ಮರಗಳನ್ನು ಬೆಳೆಸಬೇಕು ಎಂದು ಇಶಾ ಫೌಂಡೇಷನ್​ನ ಮುಖ್ಯಸ್ಥರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು ಸಲಹೆ ಕೊಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ಕಾವೇರಿ ಮಾತೆಗೆ ನಾವು ಯಾವ ರಾಜ್ಯದವರು ಎಂದು ತಿಳಿದಿಲ್ಲ. ಆದರೆ, ಬೇಸಿಗೆಯಲ್ಲಿ ಅವಳು ಬತ್ತಿ ಹೋಗಿ ಹರಿಯುವುದನ್ನು ನಿಲ್ಲಿಸುತ್ತಾಳೆ. ಕಾವೇರಿ ಕೊಳ್ಳದ ಸುಮಾರು 83,000 ಚದರ ಕಿಲೋಮೀಟರ್ ವ್ಯಾಪ್ತಿಯ ಭೂಮಿಯಲ್ಲಿ ಮರ-ಗಿಡಗಳನ್ನು ಬೆಳೆಸುತ್ತಾ ಕೃಷಿ ಮಾಡುವುದೇ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ ಎಂದಿದ್ದಾರೆ.

ಮರ-ಗಿಡಗಳನ್ನು ಬೆಳೆಸುವುದರಿಂದ ಮಾತ್ರ ಕಾವೇರಿ ವರ್ಷಪೂರ್ತಿ ತುಂಬಿ ಹರಿಯುವಳು ಪ್ರಸ್ತುತ ಸಮಸ್ಯೆಗೆ ಇದು ಪರಿಹಾರವಾಗಬಹುದು. ಬದಲಿಗೆ ಹೋರಾಟಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸದ್ಗುರು ಜಗ್ಗಿ ವಾಸುದೇವ ಸಾಮಾಜಿಕ ಜಾಲತಾಣ ಎಕ್ಸ್​ ಮೂಲಕ ಸಲಹೆ ನೀಡಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಸೆಪ್ಟೆಂಬರ್​ 29ರಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿದ್ದವು. ಬಂದ್​ನ ನ​ಡುವೆಯೇ ಕನ್ನಡಿಗರಿಗೆ CWMA ಅಕ್ಟೋಬರ್​ 15ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಆದೇಶಿಸುವ ಮೂಲಕ ಕನ್ನಡಿಗರಿಗೆ ಮತ್ತೊಂದು ಶಾಕ್​ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net