ನಾಗ ಪಂಚಮಿಯಂದು ಈ ಕೆಲಸ ಅಪ್ಪಿತಪ್ಪಿಯೂ ಮಾಡಬೇಡಿ.. ಮಾಡಿದ್ರೆ ಮುಂದಿನ ಜನ್ಮಕ್ಕೂ ಅಪಾಯ! | Naga Panchami

Untitled design (64)
Published on: 

Naga Panchami: ಶ್ರಾವಣ ಮಾಸ ಹಿಂದು ಧರ್ಮಗಳಲ್ಲಿ ಅತ್ಯಂತ ಪವಿತ್ರ ತಿಂಗಳುಗಳಲ್ಲಿ ಒಂದಾಗಿದ್ದು, ಮಹತ್ವ ಮತ್ತು ಪವಿತ್ರತೆಯನ್ನು ಪಡೆದುಕೊಂಡಿದೆ.ಈ ಶ್ರಾವಣ ಮಾಸದ ಶುಕ್ಲಾ ಪಕ್ಷದ ಐದನೇ ದಿನದಂದು ನಾಗ ಪಂಚಮಿ ಆಚರಿಸಲಾಗುತ್ತದೆ. ಹಿಂದು ಧರ್ಮದಲ್ಲಿ ಹಾವುಗಳಿಗೆ ದೇವರುಗಳ ಸ್ಥಾನಮಾನ ನೀಡಲಾಗಿದ್ದು ಅಂದು ಹಾವಿನ ಹಬ್ಬ ಮಾಡುತ್ತೇವೆ.

ಈ ದಿನ ಶಿವನ ಗಣವೆಂದು ಪರಿಗಣಿಸಲಾದ ಸರ್ಪ ದೇವರನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ. ಈ ದಿನ ಸರ್ಪ ದೇವರನ್ನು ಪೂಜಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಸರ್ಪ ಕಡಿತದ ಭಯ ದೂರವಾಗುತ್ತದೆ. ಈ ದಿನ ತಪ್ಪಾಗಿ ಕೂಡ ಮಾಡಬಾರದ ಅನೇಕ ಕೆಲಸಗಳಿವೆ.ಜೋತಿಷ್ಯದ ಪ್ರಕಾರ, ಇಂತಹ ಕೆಲಸ ಮಾಡೋದ್ರಿಂದ ಮುಂದಿನ ಜನ್ಮಕ್ಕೂ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ನಾಗ ಪಂಚಮಿ ಆಚರಣೆ ಯಾವಾಗ?

ಈ ವರ್ಷ ನಾಗ ಪಂಚಮಿ ಜುಲೈ 29, ಮಂಗಳವಾರದಂದು ಬರುತ್ತಿದೆ. ಪೂಜೆಗೆ ಶುಭ ಸಮಯ ಬೆಳಿಗ್ಗೆ 5:41 ರಿಂದ ಬೆಳಿಗ್ಗೆ 8:23 ರವರೆಗೆ ಇರುತ್ತದೆ.

ನಾಗ ಪಂಚಮಿಯಂದು ಪೂಜೆ ಹೀಗೆ ಮಾಡಿ..

ನಂಬಿಕೆಗಳ ಪ್ರಕಾರ, ತಮ್ಮ ಜಾತಕದಲ್ಲಿ ಕಾಳಸರ್ಪ ದೋಷ ಅಥವಾ ರಾಹು-ಕೇತುವಿಗೆ ಸಂಬಂಧಿಸಿದ ಯಾವುದೇ ದೋಷವಿರುವ ಜನರು, ನಾಗಪಂಚಮಿಯ ದಿನದಂದು ನಾಗದೇವನನ್ನು ಪೂಜಿಸಬೇಕು ಎಂದು ಹೇಳಲಾಗುತ್ತಿದೆ. ನಾಗಪಂಚಮಿಯ ದಿನದಂದು, ಮೊದಲು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ದೈನಂದಿನ ಕೆಲಸಗಳಿಂದ ಮುಕ್ತರಾಗಿ. ಸ್ನಾನ ಮಾಡಿ. ನಂತರ, ಶಿವನೊಂದಿಗೆ ನಾಗದೇವನನ್ನು ಪೂಜಿಸಿ. ನಾಗದೇವನ ಪೂಜೆಯಲ್ಲಿ ಹಣ್ಣುಗಳು, ಹೂವುಗಳು, ಸಿಹಿತಿಂಡಿಗಳು ಮತ್ತು ಹಾಲು ಅರ್ಪಿಸಿ.

ನಾಗಪಂಚಮಿಯಂದು ಈ ಕೆಲಸ ಮಾಡಲೇಬೇಡಿ

1.ನಾಗಪಂಚಮಿಯ ದಿನದಂದು ಆಕಸ್ಮಿಕವಾಗಿಯೂ ಹಾವನ್ನು ಕೊಲ್ಲಬಾರದು. ನೀವು ಹಾವಿಗೆ ಹಾನಿ ಮಾಡಿದರೆ, ಅದರ ಪಾಪವು ನಿಮ್ಮ ಮೇಲೆ ಬೀಳುವುದಿಲ್ಲ, ಆದರೆ ನಿಮ್ಮ ಇಡೀ ವಂಶದ ಮೇಲೆ ಬೀಳುತ್ತದೆ.

2.ನಾಗಪಂಚಮಿಯ ದಿನದಂದು ನೆಲವನ್ನು ಅಗೆಯಬಾರದು. ಹಾವುಗಳು ನೆಲದೊಳಗೆ ಬಿಲಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ. ನೆಲವನ್ನು ಅಗೆಯುವುದರಿಂದ ಹಾವುಗಳ ಮನೆ ಅಥವಾ ಬಿಲ ನಾಶವಾಗಬಹುದು. ಹೀಗೆ ಮಾಡುವುದರಿಂದ ಅನೇಕ ತಲೆಮಾರುಗಳಿಗೆ ಪಾಪ ಬರುತ್ತದೆ.

3.ಧಾರ್ಮಿಕ ಗ್ರಂಥಗಳ ಪ್ರಕಾರ, ನಾಗಪಂಚಮಿಯ ದಿನದಂದು ಚೂಪಾದ ವಸ್ತುಗಳನ್ನು ಬಳಸಬಾರದು. ಹೊಲಿಗೆ, ಕಸೂತಿ ಇತ್ಯಾದಿಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.