

ಹಗರಿಬೊಮ್ಮನಹಳ್ಳಿ: ಅನ್ನ ನೀಡುವ ರೈತರ ಹಿತ ಕಾಯಬೇಕಾಗಿರುವುದು ನಮ್ಮ ಕರ್ತವ್ಯ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಇದನ್ನೂ ಓದಿ: ಸೈನಿಕರ ಆರೋಗ್ಯ ವಿಚಾರಿಸುವುದು ಎಲ್ಲರ ಕರ್ತವ್ಯ
ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮತ್ತು ಮಾರಾಟ ಸಹಕಾರಿ ಸಂಘದ ನವೀಕರಣ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪ್ರತಿಯೊಂದು ಸಹಕಾರಿ ಸಂಘ, ಬ್ಯಾಂಕ್, ಅಧಿಕಾರಿಗಳು ಕೂಡಲೇ ರೈತರ ಕೆಲಸಗಳನ್ನು ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಬೇಡಿ ಎಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಕೆ.ಭರಮರೆಡ್ಡಿ ಮಾತನಾಡಿ, ಬೆಂಗಳೂರಿನ ಮಹಾಮಂಡಳಿ ನೀಡಿದ 10 ಲಕ್ಷ ರೂ. ಅನುದಾನದಲ್ಲಿ ಸಂಘದ ಕಟ್ಟಡ ನವೀಕರಣ ಮಾಡಲಾಗಿದೆ ಎಂದರು.
ಪುರಸಭೆ ಸದಸ್ಯ ದೀಪಕ್ ಕಠಾರೆ, ಮಾರಾಟಗಾರರ ಸಂಘದ ಉಪಾಧ್ಯಕ್ಷ ಬಣಕಾರ್ ಗೋಣೆಪ್ಪ, ನಿರ್ದೇಶಕ ಮೃತ್ಯುಂಜಯ ಬಾದಾಮಿ, ಪ್ರಮುಖರಾದ ಎಂ.ಕೊಟ್ರೇಶ್, ಸುಗ್ಗೇನಹಳ್ಳಿ ಬಸವರಾಜ್, ಎನ್.ಹಾಲೇಶ್, ಓಬಳಾಪುರ ಕರಿ ಹನುಮಂತಪ್ಪ, ಮಂಜುನಾಥ್ ಗೌಡ, ಬೆಳ್ಳಕ್ಕಿ ಪ್ರಭಾವತಿ, ಚಿಂತ್ರಪಳ್ಳಿ ನಾಗರಾಜ, ಆಲಗೂರು ಶಿವನಂದಪ್ಪ, ಎಚ್.ಎಂ.ವಿಜಯಕುಮಾರ್, ಹಸನ್ ಸಾಬ್, ಸೋಮನಗೌಡ, ಚಿತ್ತವಾಡ್ಗಿ ಕಲ್ಲೇಶ್, ಬಡಿಗೇರ ಸಿದ್ದಪ್ಪ ಇತರರಿದ್ದರು.