ತಾಂತ್ರಿಕತೆಯಿಂದ ಶಿಕ್ಷಣ ಪ್ರಕ್ರಿಯೆಗೆ ಬಲ : ರಮೇಶ್ ಬಣ್ಣನೆ ಶಾಲೆಗೆ ಸ್ಮಾಟ್ ಬೋರ್ಡ್ ಕೊಡುಗೆ

New Project (8)
Published on

ಸುಳ್ಯ: ತಾಂತ್ರಿಕತೆ ಇಂದು ಶಿಕ್ಷಣ ಪ್ರಕ್ರಿಯೆಯನ್ನು ಬಲಗೊಳಿಸಿದೆ. ಅಂತರ್ಜಾಲದಿಂದ ಪಾಠಗಳನ್ನು ನೇರವಾಗಿ ತರಗತಿಗಳಲ್ಲಿ ತೋರಿಸಲು ಸಾಧ್ಯ. ಅಂತಹ ಒಂದು ಸೌಲಭ್ಯವೇ ಸ್ಮಾರ್ಟ್ ಬೋರ್ಡ್ ಎಂದು ರೈಟ್ ಟು ಲೀವ್ ಸಂಸ್ಥೆಯ ನಿರ್ದೇಶಕ ರಮೇಶ್ ಹೇಳಿದರು.

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಸ್ಮಾರ್ಟ್ ಬೋರ್ಡ್ ಗುರುವಾರ ಕೊಡುಗೆ ನೀಡಿ ಮಾತನಾಡಿ, ರೈಟ್ ಟು ಲೀವ್ ಸಂಸ್ಥೆ ರಾಜ್ಯದಾದ್ಯಂತ ಸುಮಾರು 200 ಶಾಲೆಗಳಿಗೆ ವಿವಿಧ ಕೊಡುಗೆ ನೀಡಿದೆ. ಇಂತಹ ಕೊಡುಗೆಗಳನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸಬೇಕು ಎಂದರು.

ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈಟ್ ಟು ಲೀವ್ ಸಂಸ್ಥೆ ಸಮಾಜಕ್ಕೆ ಸಹಾಯ ಮಾಡುವುದರ ಜತೆಗೆ ಸಂಪನ್ಮೂಲದ ಹಂಚಿಕೆ ಕಾರ್ಯ ಮಾಡುತ್ತಿದೆ ಎಂದರು.

ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾಕುಮಾರಿ ಕೆ.ಎಸ್. ವಂದಿಸಿದರು. ಶಿಕ್ಷಕಿ ಸವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net