ಶೌರ್ಯ ತಂಡ ಸದಸ್ಯರಿಂದ ಶ್ರಮದಾನ

shaurya
ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಲೈಟ್‌ಹೌಸ್ ರಸ್ತೆಯಲ್ಲಿ ಬಿದ್ದ ಮರಳನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಿದರು.
Published on

ಗಂಗೊಳ್ಳಿ: ಗಂಗೊಳ್ಳಿ ಲೈಟ್‌ಹೌಸ್‌ಗೆ ಹೋಗುವ ರಸ್ತೆಬದಿ ಚರಂಡಿ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಮರಳಿನ ರಾಶಿ ಗುಡ್ಡೆಯಾಗಿ, ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು, ಸವಾರರು ಗಾಯಗೊಂಡಿರುವ ಘಟನೆ ನಡೆಯುತ್ತಿತ್ತು. ಇದನ್ನು ಗಮನಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗಂಗೊಳ್ಳಿ ಕಾರ್ಯಕ್ಷೇತ್ರದ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ರಸ್ತೆಯಲ್ಲಿ ಬಿದ್ದ ಮರಳನ್ನು ಸಂಪೂರ್ಣ ತೆಗೆದು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವಿಜಯ ಪೂಜಾರಿ ಅವರು ಕಸ ವಿಲೇವಾರಿಗೆ ತಮ್ಮ ಗೂಡ್ಸ್ ವಾಹನ ಒದಗಿಸಿ ತಂಡಕ್ಕೆ ನೆರವಾದರು. ಸ್ಥಳೀಯರಾದ ನಾಗರಾಜ ಶೇರುಗಾರ್ ಶೌರ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net