ದಾನ ಪುರುಷಾರ್ಥ ಭಿತ್ತಿಪತ್ರಿಕೆ ಅನಾವರಣ

New Project (16)
Published on

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆಯವರ ಚತುರ್ದಾನಗಳ ಕುರಿತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ‘ದಾನ ಪುರುಷಾರ್ಥ’ ನಾಮಾಂಕಿತ ಭಿತ್ತಿಪತ್ರಿಕೆಯನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಹೇಮಾವತಿ ವಿ.ಹೆಗ್ಗಡೆ ಅನಾವರಣಗೊಳಿಸಿದರು.

ಭಿತ್ತಿ ಪತ್ರಿಕೆ ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳನ್ನು ಹರಸಿದರು. ಮಂಜುಶ್ರೀ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಅನುವು ಮಾಡಿದರು.

ಎಸ್‌ಡಿಎಂ ಪಪೂ ಕಾಲೇಜು ಪ್ರಾಚಾರ್ಯ ಪ್ರಮೋದ್ ಕುಮಾರ್, ಉಪಪ್ರಾಚಾರ್ಯ ಡಾ.ರಾಜೇಶ್ ಬಿ., ಸಂಸ್ಕೃತ ಭಾಷಾ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್, ಭಿತ್ತಿಪತ್ರಿಕೆ ರಚಿಸಿದ ವಿದ್ಯಾರ್ಥಿಗಳಾದ ಸಂಕೀರ್ತನಾ, ಅಮೂಲ್ಯ ಪ್ರಭು, ಧೃತಿ ಪಿ.ಶೆಟ್ಟಿ, ಕ್ಷಿಪ್ರಪ್ರಸಾದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net