ಅಮೆರಿಕದ ಚುನಾಯಿತ ಅಧ್ಯಕ್ಷರಿಂದ ತೆರಿಗೆ ಕುರಿತು ಭಾರತಕ್ಕೆ ಎಚ್ಚರಿಕೆ; ಡೊನಾಲ್ಡ್​ ಟ್ರಂಪ್​ ಹೇಳಿರುವುದೇನು? | Donald Trump

Untitled design - 2024-12-18T134135.364
Published on

ವಾಷಿಂಗ್ಟನ್​ ಡಿಸಿ: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಅಧಿಕಾರ ಸ್ವೀಕರಿಸುವ ಮುನ್ನ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ಕಳುಹಿಸುವ ಅಮೆರಿಕದ ಸರಕುಗಳ ಮೇಲೆ ವಿಧಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಡೊನಾಲ್ಡ್​ ಟ್ರಂಪ್​ ಅವರ ಈ ಹೇಳಿಕೆ ಭಾರತ ಸರ್ಕಾರವನ್ನು ಯೋಚಿಸುವಂತೆ ಮಾಡಬಹುದು. ಭಾರತವು ಅಮೆರಿಕದ ವಸ್ತುಗಳ ಮೇಲೆ ವಿಧಿಸುವ ತೆರಿಗೆಯನ್ನು ಅಮೆರಿಕವು ಭಾರತೀಯ ವಸ್ತುಗಳ ಮೇಲೆ ವಿಧಿಸುತ್ತದೆ ಎಂದು ಹೇಳಿದರು.

ಎಲ್ಲಾ ದೇಶಗಳು ಅಮೆರಿಕನ್ ಸರಕುಗಳ ಆಮದಿನ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆಗೆ (ಹೆಚ್ಚಿನ ಸುಂಕ) ಪ್ರತಿಕ್ರಿಯೆಯಾಗಿ ಇದೇ ರೀತಿಯ ಹೆಚ್ಚಿನ ತೆರಿಗೆಯನ್ನು (ಪರಸ್ಪರ ಸುಂಕ) ವಿಧಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು. ಯಾರಾದರೂ ನಮ್ಮ ಮೇಲೆ ತೆರಿಗೆ ವಿಧಿಸಿದರೆ, ಅವರ ಮೇಲೂ ಅದೇ ತೆರಿಗೆ ವಿಧಿಸುತ್ತೇವೆ. ಭಾರತ ನಮಗೆ ತೆರಿಗೆ ವಿಧಿಸಿದರೆ, ನಾವು ಅವರಿಗೂ ತೆರಿಗೆ ವಿಧಿಸುತ್ತೇವೆ. ನಮ್ಮ ಎಲ್ಲ ಸರಕುಗಳ ಮೇಲೆ ಅವರು ತೆರಿಗೆ ವಿಧಿಸುತ್ತಾರೆ ಮತ್ತು ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ ಎಂದು ಡೊನಾಲ್ಡ್​​ ಟ್ರಂಪ್​ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಚೀನಾದೊಂದಿಗೆ ಸಂಭವನೀಯ ವ್ಯಾಪಾರ ಒಪ್ಪಂದದ ಬಗ್ಗೆ ಕೇಳಿದಾಗ ಟ್ರಂಪ್ ಅವರು, ಯಾರು ನಮಗೆ ತೆರಿಗೆ ವಿಧಿಸಿದರೂ ನಾವು ಅವರನ್ನು ಅದೇ ರೀತಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಹಲವು ದೇಶಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುತ್ತವೆ ಎಂದು ತಿಳಿಸಿದರು.

ಡೊನಾಲ್ಡ್​​ ಟ್ರಂಪ್​​​ ನ್ಯಾಯಸಮ್ಮತತೆ (ಪರಸ್ಪರ) ಎಂಬುದು ಬಹಳ ಮುಖ್ಯ ಎಂದು ಹೇಳಿದರು. ಯಾರಾದರೂ ನಮ್ಮ ಮೇಲೆ ತೆರಿಗೆ ವಿಧಿಸಿದರೆ ನಾವು ನಮ್ಮ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಭಾರತವು ನಮಗೆ 100 ಪ್ರತಿಶತ ಶುಲ್ಕ ವಿಧಿಸಿದರೆ, ನಾವೇಕೆ ಅದನ್ನು ಮಾಡಬಾರದು? ಅವರು ನಮಗೆ ಸೈಕಲ್ ಕಳುಹಿಸುತ್ತಾರೆ. ಅವರಿಗೂ ನಾವು ಸೈಕಲ್ ಕಳುಹಿಸುತ್ತೇವೆ ಎಂದಿದ್ದಾರೆ.

ಭಾರತವು ಸಾಕಷ್ಟು ಶುಲ್ಕ ವಿಧಿಸುತ್ತದೆ. ಬ್ರೆಜಿಲ್ ತುಂಬಾ ಶುಲ್ಕ ವಿಧಿಸುತ್ತದೆ, ಅವರು ನಮಗೆ ಶುಲ್ಕ ವಿಧಿಸಲು ಬಯಸಿದರೆ, ಅದು ಸರಿ, ಆದರೆ ನಾವು ಅವರಿಗೆ ಅದೇ ಶುಲ್ಕ ವಿಧಿಸಲಿದ್ದೇವೆ ಎಂದು ಟ್ರಂಪ್ ಹೇಳಿದರು ಮತ್ತು ವಾಣಿಜ್ಯ ಕಾರ್ಯದರ್ಶಿ ಟ್ರಂಪ್​ ಅನುಮೋದನೆಯ ಮುದ್ರೆಯನ್ನು ನೀಡಿದ್ದರಂತೆ ನಮಗೆ ಏನು ಮಾಡುತ್ತಾರೋ ಅದೇ ಅವನಿಗೂ ಮಾಡಲಾಗುವುದು ಎಂದು ತಿಳಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net