

rabies : ತುಂಬಾ ಪ್ರೀತಿಯಿಂದ ಸಾಕಿದ್ದ ಸಾಕು ನಾಯಿ ಉಗುರುಗಳಿಂದ ಪರಚಿದ್ದ ಹಿನ್ನೆಲೆಯಲ್ಲಿ ರೇಬೀಸ್‌ನಿಂದ ಯುವಕ ಸಾವನ್ನೊಪ್ಪಿದ್ದಾನೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಎದುರ್ಲಬಯರಂ ನಿವಾಸಿ 25 ವರ್ಷದ ಸಂದೀಪ್ ಸಾಕು ನಾಯಿ ಕಚ್ಚಿ ರೇಬೀಸ್ ನಿಂದ ಸಾವನ್ನಪ್ಪಿದ್ದಾನೆ. ಇದು ಕೇವಲ ವ್ಯಕ್ತಿಯ ಸಾವು ಅಲ್ಲ, ರೇಬೀಸ್ ಎಷ್ಟು ಅಪಾಯಕಾರಿ ಮತ್ತು ನಾಯಿ ಉಗುರು ಗಾಯಗಳನ್ನು ಹಗುರವಾಗಿ ಪರಿಗಣಿಸುವುದು ಎಷ್ಟು ಮಾರಕ ಎಂಬುದರ ಬಗ್ಗೆ ಎಚ್ಚರಿಕೆ.
ಎರಡು ತಿಂಗಳ ಹಿಂದೆ ಸಂದೀಪ್ ಬೀದಿಯಲ್ಲಿದ್ದ ಒಂದು ನಾಯಿಮರಿಯನ್ನು ಮನೆಗೆ ತಂದಿದ್ದ. ಅದು ಚಿಕ್ಕದಾಗಿದ್ದರಿಂದ, ಕುಟುಂಬದವರೆಲ್ಲರೂ ಮುದ್ದಾಗಿ ಬೆಳಸಿದ್ದರು. ಸಂದೀಪ್ ಅದನ್ನು ಪಳಗಿಸುತ್ತಿದ್ದಾಗ, ನಾಯಿ ಇದ್ದಕ್ಕಿದ್ದಾಗೆ ಅವನ ತನ್ನ ತಂದೆಯನ್ನು ಕಚ್ಚಲು ಮುಂದಾಯ್ತು ಆ ಸಮಯದಲ್ಲಿ, ಅದನ್ನು ಹಿಂದಕ್ಕೆ ಎಳೆಯುವಾಗ... ನಾಯಿಯ ಕಾಲ್ಬೆರಳ ಉಗುರು ಸಂದೀಪ್‌ಗೆ ಚುಚ್ಚಿತು.
ನಂತರ, ಕುಟುಂಬ ಸದಸ್ಯರು ತಕ್ಷಣ ತನ್ನ ತಂದೆಯ ಗಾಯಕ್ಕೆ ಚಿಕಿತ್ಸೆ ನೀಡಿದರು. ಆದರೆ, ಸಂದೀಪ್ ತನ್ನ ಗಾಯದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಇದು ಸಣ್ಣ ಗಾಯ, ಅದು ಬೇಗ ಗುಣವಾಗುತ್ತದೆ ಎಂದು ಅವನು ಭಾವಿಸಿ ಯಾವುದೇ ಚಿಕಿತ್ಸೆ ನೀಡದೆ ಹಾಗೆ ಉಳಿದನು. ಆದರೆ ಕೆಲವು ದಿನಗಳ ನಂತರ ಅವನಿಗೆ ತಲೆನೋವು, ಜ್ವರ ಮತ್ತು ಆಯಾಸವಿತ್ತು. ನಂತರ ಅವನಿಗೆ ನೀರಿನ ಭಯ , ನುಂಗಲು ತೊಂದರೆ, ಉದ್ವೇಗ ಮತ್ತು ಮೂರ್ಛೆ ಹೋಗುವಂತಹ ಲಕ್ಷಣಗಳು ಕಾಣಿಸಿಕೊಂಡವು. ಅವನ ಕುಟುಂಬ ಸದಸ್ಯರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಅವನನ್ನು ಪರೀಕ್ಷಿಸಿ ಅವನಿಗೆ ರೇಬೀಸ್ ಸೋಂಕು ತಗುಲಿದೆ ಎಂದು ಹೇಳಿದರು.
ರೋಗವು ಈಗಾಗಲೇ ಮುಂದುವರೆದಂತೆ, ಚಿಕಿತ್ಸೆಯು ವಿಫಲವಾಯಿತು. ಸೋಮವಾರ ರಾತ್ರಿ ಸಂದೀಪ್ ಸಾವನ್ನಪ್ಪಿದ ನಂತರ ಗ್ರಾಮ ಶೋಕದಲ್ಲಿ ಮುಳುಗಿತ್ತು. ತಾವು ಸಾಕಿದ ನಾಯಿಮರಿ ಮಗನ ಜೀವವನ್ನು ಬಲಿ ತೆಗೆದುಕೊಂಡಿದ್ದರಿಂದ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ವೈಜ್ಞಾನಿಕ ಅಧ್ಯಯನಗಳು ಮತ್ತು WHO ಪ್ರಕಾರ, ರೇಬೀಸ್ ಹರಡುವಿಕೆಯು ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ ಸಂಭವಿಸುತ್ತದೆ. ಇದು ಹೆಚ್ಚಾಗಿ ಮನುಷ್ಯನನ್ನು ಕಚ್ಚುವ ಮೂಲಕ ಇಲ್ಲವೇ, ಪ್ರಾಣಿಗಳ ಉಗುರುಗಳು ಲಾಲಾರಸದಿಂದ ಕೂಡಿದ್ದರೆ, ಇದು ದೇಹವವನ್ನು ಗೀರಿದಾಗ ರೇಬಿಸ್ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ನಾಯಿ ಕಚ್ಚಿದ ತಕ್ಷಣ, ಗಾಯವನ್ನು ಸೋಪು ಮತ್ತು ನೀರಿನಿಂದ ತೊಳೆಯಬೇಕು.
ರೇಬೀಸ್ ವಿರೋಧಿ ಲಸಿಕೆ (ARV) ಅನ್ನು 0,3,7,14,28 ದಿನಗಳವರೆಗೆ ತಕ್ಷಣವೇ ನೀಡಬೇಕು.
ಸಾಕು ನಾಯಿಗಳಿಗೆ ವರ್ಷಕ್ಕೊಮ್ಮೆ ಲಸಿಕೆ ಹಾಕಬೇಕು. ತೆಲಂಗಾಣ ಸರ್ಕಾರವು ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದ (NRCP) ಭಾಗವಾಗಿ ಉಚಿತ ಲಸಿಕೆಗಳನ್ನು ನೀಡುತ್ತಿದೆ.