

ಬೆಂಗಳೂರು: ( dog abuse incident in bengaluru ) ಮೂಕ ಪ್ರಾಣಿ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ, ರಕ್ತ ಬರುವಂತೆ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಜಯನಗರದ ಸುತ್ತ ಮುತ್ತ ವಿದ್ಯಾ ಎಂಬುವ ಮಹಿಳೆ ಶ್ವಾನಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ನಿನ್ನೆ (ಮಾರ್ಚ್ 13) ರಾತ್ರಿ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಆ ವೇಳೆ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಬೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ಕುಡಲೇ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿರುವುದು ತಿಳಿದು ಬಂದಿದೆ.
ಇಂದು ಸಂಜೆ ಅದೇ ಶಾಲಿನಿ ಮೈದಾನದ ಬಳಿ ಶ್ವಾನಪ್ರೀಯರು ತೆರಳಿದ್ದಾರೆ. ಈ ವೇಳೆ ಅದೇ ವ್ಯಕ್ತಿ ಕಂಡಿದ್ದಾನೆ. ಬಳಿಕ ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.