ಆತನ ವರ್ತನೆಯಿಂದಲೇ ತಂಡ ಒತ್ತಡಕ್ಕೆ ಸಿಲುಕಲು ಪ್ರಮುಖ ಕಾರಣ; Virat Kohli ಕುರಿತು ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Virat Kohli
Published on

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 1-3 ಅಂತರದಿಂದ ಸೋಲುಂಡಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಇದ್ದ ಅವಕಾಶವನ್ನು ತಪ್ಪಿಸಿಕೊಂಡಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 295 ರನ್​ಗಳ ಭರ್ಜರಿ ಜಯಗಳಿಸಿದ್ದು ಬಿಟ್ಟರೆ ಟೀಮ್​ ಇಂಡಿಯಾ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, 10 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ಸೋಲುಂಡಿದೆ.

ಸರಣಿಯಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ (Rohit Sharma) ಹಾಗೂ ವಿರಾಟ್​ (Virat Kohli) ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ನಿರೀಕ್ಷೆ ಮೂಡಿಸಿದ್ದ ಈ ಇಬ್ಬರು ಆಟಗಾರರು ಭಾರೀ ನಿರಾಸೆಯನ್ನು ಉಂಟು ಮಾಡಿದ್ದು, ಸರಣಿ ಮುಗಿದ ಬೆನ್ನಲ್ಲೇ ಇವರುಗಳ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್ (Sunil Gavaskar) ಮಾತನಾಡಿದ್ದು, ವಿರಾಟ್​ ಕೊಹ್ಲಿ ನಡೆಯ ಕುರಿತು ಕಿಡಿಕಾರಿದ್ದಾರೆ.

Sunil Gavaskar

ವಿರಾಟ್ ತಾನು ಏನು ಮಾಡಿದರೂ ಅದು ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಆತ ಆಸ್ಟ್ರೇಲಿಯಾದ ಪ್ರೇಕ್ಷಕರು ಹಾಗೂ ಆಟಗಾರರ ಜತೆ ನಡೆದುಕೊಂಡ ರೀತಿ ನೋಡಿದರೆ ಎಲ್ಲವೂ ಹೇಳುತ್ತದೆ. ಭಾರತೀಯರು ಪ್ರಚೋದನೆ ನೀಡಿದರೆ ಪ್ರತೀಕಾರ ತೀರಿಸಿಕೊಳ್ಳಲು ನಾಚಿಕೆಪಡುವುದಿಲ್ಲ, ಆದರೆ ಇಲ್ಲಿ ಪ್ರಚೋದನೆಯು ಸರಳವಾಗಿ ಇರಲಿಲ್ಲ.

ಆಟಗಾರರು ಅನುಭವದಿಂದ ಕಲಿಯುವ ಒಂದು ವಿಷಯವೆಂದರೆ ಅದು ನಿಷ್ಪ್ರಯೋಜಕವಾಗಿದೆ. ಜನಸಮೂಹ, ಉತ್ತಮ ಸಮಯವನ್ನು ಹೊಂದಲು ಬಂದಿದ್ದಾರೆ, ಆದ್ದರಿಂದ ಆಟಗಾರರನ್ನು ಅಬ್ಬರಿಸುವುದು ಎಂದಿಗೂ ವೈಯಕ್ತಿಕವಲ್ಲ ಆದರೆ ಅದಕ್ಕೆ ಪ್ರತಿಕ್ರಿಯಿಸುವುದು ಆಟಗಾರನಿಗೆ ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ ಮತ್ತು ವಾಸ್ತವವಾಗಿ ಹೆಚ್ಚು ಹಾನಿ ಮಾಡುತ್ತದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್ ವಿರಾಟ್​ ಕೊಹ್ಲಿ ನಡೆಯ ಕುರಿತು ಹರಿಹಾಯ್ದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net