More

    ಹೆಚ್ಚಾಗುತ್ತಾ ಹಾಸನಾಂಬೆಯ ದರ್ಶನದ ದಿನಗಳ ಸಂಖ್ಯೆ?; ಸಚಿವೆಯ ಪ್ರತಿಕ್ರಿಯೆ ಇದು..

    ಹಾಸನ: ವರ್ಷಕ್ಕೆ ಒಮ್ಮೆ ಕೆಲವು ದಿನಗಳ ಮಟ್ಟಿಗಷ್ಟೇ ತೆರೆಯಲಾಗುವ ಹಾಸನಾಂಬೆಯ ದರ್ಶನದ ಅವಧಿಯನ್ನು ಹೆಚ್ಚಿಸಬೇಕು ಎಂಬ ಮನವಿಯೊಂದು ಸರ್ಕಾರಕ್ಕೆ ತಲುಪಿದ್ದು, ಆ ಕುರಿತು ಇದೀಗ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

    ಇಂದು ಹಾಸನ ಕ್ಷೇತ್ರದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಹಾಸನಾಂಬೆಯ ದರ್ಶನದ ದಿನಗಳನ್ನು ಹೆಚ್ಚಿಸಬೇಕು ಎಂದು ಈ ಹಿಂದೆ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಇಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಹಾಸನಾಂಬೆ ಜಾತ್ರಾ ಮಹೋತ್ಸವ: ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ಮೊಳಗಿತು ಜಯಘೋಷ…

    ಪ್ರಸ್ತಾವನೆ ಸಲ್ಲಿಸಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದ ಸಚಿವೆ, ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವಂಥ ಪದ್ಧತಿಯಲ್ಲಿ ಬದಲಾವಣೆ ತರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ ಎಂದಿದ್ದಾರೆ. ಯಾರ ಭಾವನೆಗೂ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಹಾಸನಾಂಬೆ ಶಕ್ತಿ ದೇವತೆ, ಯಾವುದೇ ಬದಲಾವಣೆ ಬಗ್ಗೆ ಬಹಳಷ್ಟು ಯೋಚನೆ ಮಾಡಬೇಕಾಗುತ್ತದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ನಂಬಿಕೆಯನ್ನು ನಾವು ಕಡೆಗಣಿಸುವುದು ಸರಿಯಲ್ಲ ಅಂತ ಅನಿಸುತ್ತದೆ ಎನ್ನುವ ಮೂಲಕ ಅವರು ಸದ್ಯಕ್ಕಂತೂ ಅವಧಿ ಹೆಚ್ಚಳದ ಚಿಂತನೆ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ಕೊನೆಗೂ 36 ವರ್ಷಗಳ ನರಕಯಾತನೆಯಿಂದ ಬಿಡುಗಡೆ; ಮಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts