

Petrol Filling ; ಬೆಳಗ್ಗೆ ಬೇಗನೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವುದರಿಂದ ಮೈಲೇಜ್ ಹೆಚ್ಚಾಗುತ್ತದೆ ಎಂದು ಅನೇಕ ವಾಹನ ಸವಾರರು ನಂಬಿದ್ದಾರೆ. ತಾಪಮಾನ ಕಡಿಮೆ ಇರುವುದರಿಂದ ಬೆಳಗ್ಗೆ ಅಥವಾ ರಾತ್ರಿ ಇಂಧನದ ಸಾಂದ್ರತೆ ಹೆಚ್ಚಾಗಿರುತ್ತದೆ ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಪೆಟ್ರೋಲ್ ತುಂಬಿಸುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ.
ಆದರೆ ವಾಸ್ತವವಾಗಿ ಪೆಟ್ರೋಲ್ ಪಂಪ್ಗಳಲ್ಲಿನ ಇಂಧನ (ಪೆಟ್ರೋಲ್-ಡೀಸೆಲ್) ಟ್ಯಾಂಕ್ಗಳನ್ನು ಭೂಮಿಯ ಒಳಗಡೆ ಇರಿಸಲಾಗಿರುತ್ತದೆ. ಇದು ಹೊರಗಿನ ತಾಪಮಾನದಿಂದ ಪ್ರಭಾವಿತವಾಗಿರುವುದಿಲ್ಲ. ಈ ಟ್ಯಾಂಕ್ಗಳಲ್ಲಿನ ತಾಪಮಾನವು ಯಾವಾಗಲೂ ಸಮವಾಗಿರುತ್ತದೆ. ಅಂದರೆ ನೀವು ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಪೆಟ್ರೋಲ್ ತುಂಬಿಸಿದರೂ ಯಾವುದೇ ಸಮಯದಲ್ಲಿ, ನಿಮಗೆ ಒಂದೇ ಪ್ರಮಾಣದ ಇಂಧನ ಸಿಗುತ್ತದೆ. ಸಮಯವು ಇಂಧನದ ಸಾಂದ್ರತೆ ಅಥವಾ ಪ್ರಮಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಇನ್ನೂ ವಾಹನಗಳ ಮೈಲೇಜ್ ಡ್ರೈವಿಂಗ್ ಶೈಲಿ, ಟೈರ್ ಒತ್ತಡ, ರಸ್ತೆ ಸ್ಥಿತಿ, ಮತ್ತು ವಾಹನದ ನಿರ್ವಹಣೆಯಂತಹ ಅಂಶಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.
ಈ ಸಮಯದಲ್ಲಿ ಪೆಟ್ರೋಲ್ ತುಂಬಿಸುವುದರಿಂದ ಸಾಕಷ್ಟು ಪೆಟ್ರೋಲ್ ಸಿಗುತ್ತದೆ ಎಂದು ಅವರು ನಂಬಿದ್ದಾರೆ. ಹಗಲಿನಲ್ಲಿ ಬಿಸಿಲಿನ ಶಾಖದಿಂದಾಗಿ ಪೆಟ್ರೋಲ್ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದಾಗಿ ಬೆಳಗ್ಗೆ ಅಥವಾ ರಾತ್ರಿ ಪೆಟ್ರೋಲ್ ತುಂಬಿಸುವುದು ಪ್ರಯೋಜನಕಾರಿ ಎಂಬುದು ಅನೇಕರ ವಾದ.
(ಏಜೆನ್ಸೀಸ್)
ಸರ್ಕಾರಿ ಮಾನದಂಡಗಳ ಪ್ರಕಾರ, ಪೆಟ್ರೋಲ್ ಸಾಂದ್ರತೆಯು ಪ್ರತಿ ಘನ ಮೀಟರ್ಗೆ ಸುಮಾರು 730 ರಿಂದ 800 ಕಿಲೋಗ್ರಾಂಗಳಷ್ಟಿದ್ದರೆ, ಡೀಸೆಲ್ ಸಾಂದ್ರತೆಯು ಪ್ರತಿ ಘನ ಮೀಟರ್ಗೆ 830 ರಿಂದ 900 ಕಿಲೋಗ್ರಾಂಗಳ ನಡುವೆ ಇರುತ್ತದೆ. ಪೆಟ್ರೋಲ್ ಪಂಪ್ನಲ್ಲಿರುವ ಸಾಂದ್ರತೆ ಮೀಟರ್ನೊಂದಿಗೆ ನೀವು ಇದನ್ನು ಪರಿಶೀಲಿಸಬಹುದು.