

ರಾಜಸ್ಥಾನ: ಯುವಕನೊಬ್ಬ ಹೊಟ್ಟೆಯಿಂದ ಬರೋಬ್ಬರಿ 56 ಬ್ಲೇಡ್ ತುಂಡುಗಳನ್ನು ವೈದ್ಯರು ತೆಗೆದಿದ್ದಾರೆ. ಈ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
26 ವರ್ಷದ ಯಶ್ಪಾಲ್ ರಕ್ತ ವಾಂತಿ ಮಾಡಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಎಕ್ಸ್-ರೇ ಮಾಡಿದಾಗ ಅವನ ಹೊಟ್ಟೆಯಲ್ಲಿ ಹಲವಾರು ಶೇವಿಂಗ್ ಬ್ಲೇಡ್ಗಳು ಇರುವುದು ಕಂಡುಬಂದವು. ನಂತರ, ವೈದ್ಯರು ಎಂಡೋಸ್ಕೋಪಿ ನಡೆಸಿದರು ಮತ್ತು ನಂತರ ಒಟ್ಟು 56 ಶೇವಿಂಗ್ ಬ್ಲೇಡ್ ತುಂಡುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಒಂದರ ನಂತರ ಒಂದರಂತೆ ತೆಗೆದುಹಾಕಿದ್ದಾರೆ.
ಯುವಕ ಈ ತುಂಡುಗಳನ್ನು ಹೇಗೆ ನುಂಗಿದ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ, ಆದರೆ ಯುವಕನ ಕುಟುಂಬ, ಅವನ ಸ್ನೇಹಿತರು ಮತ್ತು ವೈದ್ಯರು ಸಹ ಈ ಘಟನೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಯಶ್ಪಾಲ್ ಅವರ ಆರೋಗ್ಯ ಸ್ಥಿರವಾಗಿದೆ ಅಂತ ತಿಳಿಸಿದ್ದಾರೆ. ಡಾ. ನರಸಿ ರಾಮ್ ದೇವಸಿ ಅವರು ತುರ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಯುವಕನನ್ನು ಆಸ್ಪತ್ರೆಗೆ ಕರೆತಂದಾಗ ಆಮ್ಲಜನಕದ ಮಟ್ಟವು 80 ರಷ್ಟಿತ್ತು. ತನಿಖೆಯಲ್ಲಿ, ಹೊಟ್ಟೆಯಲ್ಲಿ ಬ್ಲೇಡ್ ಪತ್ತೆಯಾದಾಗ ಶಸ್ತ್ರಚಿಕಿತ್ಸೆಯ ಮೂಲಕ 56 ಬ್ಲೇಡ್ಗಳನ್ನು ತೆಗೆದುಹಾಕಲಾಯಿತು.