More

    13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ

    ಮುಂಬೈ: ಕರೊನಾ ಒಂದು ಬಾರಿ ಬಂದರೇ ಅದರಿಂದ ನರಕ ಯಾತನೆ ಅನುಭವಿಸಿದವರು ಸಾಕಷ್ಟು ಜನರಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಕರೊನಾ ಬಂದಿದೆ. ಕರೊನಾ ಲಸಿಕೆ ಪಡೆದ ನಂತರವೂ ಎರಡು ಬಾರಿ ಕರೊನಾ ಬಂದಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

    ಮಹಾರಾಷ್ಟ್ರದ ಮುಂಬೈನ ಮುಲುಂದ್ ಪ್ರದೇಶದಲ್ಲಿರುವ ವೀರ ಸಾವರ್ಕರ್ ಆಸ್ಪತ್ರೆಯಲ್ಲಿ ಕರೊನಾ ವಾರ್ಡ್​ನಲ್ಲಿ ಕೆಲಸ ಮಾಡುತ್ತಿರುವ ವೈದ್ಯೆ ಸೃಷ್ಟಿ ಹಲ್ಲಾರಿ (26) ಈ ರೀತಿ ಮೂರು ಬಾರಿ ಕರೊನಾಕ್ಕೆ ತುತ್ತಾದಾಕೆ. ಆಕೆಗೆ ಕಳೆದ ವರ್ಷ ಜೂನ್ 17ರಂದು ಮೊದಲನೇ ಬಾರಿಗೆ ಕರೊನಾ ಸೋಂಕು ದೃಢವಾಗಿತ್ತಂತೆ. ಆಗ ಹೆಚ್ಚಿನ ಲಕ್ಷಣ ಕಾಣಿಸಿಕೊಂಡಿಲ್ಲವಾದ್ದರಿಂದ ಆಕೆ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆದಿದ್ದಾಳೆ. ಅದಾದ ನಂತರ ಈ ವರ್ಷ ಮಾರ್ಚ್ 8ರಂದು ಆಕೆ ಮತ್ತು ಆಕೆಯ ಕುಟುಂಬ ಕೋವಿಶೀಲ್ಡ್ ಮೊದಲನೇ ಲಸಿಕೆ ಪಡೆದಿದೆ. ಏಪ್ರಿಲ್ 29ಕ್ಕೆ ಎರಡನೇ ಲಸಿಕೆಯನ್ನೂ ಪಡೆದಿದ್ದಾರೆ.

    ಲಸಿಕೆ ಪಡೆದ ಒಂದು ತಿಂಗಳ ನಂತರ ಅಂದರೆ ಮೇ 29ರಂದು ಸೃಷ್ಟಿಗೆ ಎರಡನೇ ಬಾರಿ ಸೋಂಕು ದೃಢವಾಗಿದೆ. ಆಗಲೂ ಹೆಚ್ಚಿನ ರೋಗ ಲಕ್ಷಣ ಕಾಣಿಸಿಕೊಂಡಿಲ್ಲವಾದ್ದರಿಂದ ಆಕೆ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದಾಳೆ. ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದ ವೈದ್ಯೆಯಲ್ಲಿ ಜುಲೈ 11ರಂದು ಮೂರನೇ ಬಾರಿಗೆ ಸೋಂಕು ಪತ್ತೆಯಾಗಿದೆ. ಆಕೆಯ ಜತೆ ಆಕೆಯ ಅಪ್ಪ, ಅಮ್ಮ ಮತ್ತು ಸಹೋದರನಿಗೂ ಸೋಂಕು ದೃಢವಾಗಿದೆ. ನಾಲ್ವರಲ್ಲೂ ಸೋಂಕಿನ ಲಕ್ಷಣ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಮೆಡೆಸಿವಿರ್ ಚಿಕಿತ್ಸೆ ಕೊಡಲಾಗಿದೆ. ಎರಡೂ ಅಲೆಗಿಂತ ಮೂರನೇ ಅಲೆ ನನ್ನನ್ನು ಹೆಚ್ಚು ಕಾಡಿತು ಎಂದಿದ್ದಾರೆ ವೈದ್ಯೆ ಸೃಷ್ಟಿ. (ಏಜೆನ್ಸೀಸ್)

    ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಲು ಯೋಧರ ನಿಯೋಜನೆ? ನಿಜಾಂಶ ಇಲ್ಲಿದೆ ನೋಡಿ..

    ಈಶಾನ್ಯ ಭಾರತದವರಾಗಿ ಪದಕ ಗೆದ್ದರೆ ಮಾತ್ರ ಭಾರತೀಯರಾಗುತ್ತೀರಿ, ಇಲ್ಲವಾದರೆ ನಿಮ್ಮ ಹೆಸರೇ ಬೇರೆ!

    ಅಂತೂ ಔಟ್ ಆದ್ರು ಆ ಕಂಟೆಸ್ಟೆಂಟ್​! ಬಿಗ್​ಬಾಸ್ ಮನೆಯಿಂದ ಮಧ್ಯ ರಾತ್ರಿಯೇ ಹೊರಬಂದ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts