VIDEO| PPE ಕಿಟ್​ ಧರಿಸಿ ಡ್ಯಾನ್ಸ್​ ಮಾಡಿದ ಲೇಡಿ ಡಾಕ್ಟರ್​ ಇವರೇ ನೋಡಿ...!

Richa Negi
Published on

ನವದೆಹಲಿ: ಮಹಿಳಾ ವೈದ್ಯರೊಬ್ಬರು ಪಿಪಿಇ ಕಿಟ್​ ಧರಿಸಿ ಡ್ಯಾನ್ಸ್​ ಮಾಡಿದ್ದ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿತ್ತು. ಡ್ಯಾನ್ಸ್​ ಮಾಡಿದವರ ಹೆಸರೇನೋ ತಿಳಿದಿತ್ತು. ಆದರೆ, ಅವರ ಮುಖ ಪರಿಚಯ ಆಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಸಹ ಕೇಳಿಬಂದಿದ್ದವು. ಇದೀಗ ಅದಕ್ಕೆ ಉತ್ತರ ದೊರಕಿದೆ.

ಅಂದಹಾಗೆ ಕರೊನಾ ವೈರಸ್‌ ಹಾವಳಿಯಿಂದಾಗಿ ಅದೆಷ್ಟೋ ವೈದ್ಯರು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದಲೇ ಇವರನ್ನು ಕರೊನಾ ವಾರಿಯರ್ಸ್‌ ಎನ್ನಲಾಗುತ್ತಿದೆ. ಸೋಂಕಿನ ನಡುವೆಯೇ ತಮ್ಮ ಕುಟುಂಬಸ್ಥರನ್ನೂ ದೂರ ಇಟ್ಟು ಸೇವೆ ಸಲ್ಲಿಸುವ ಹಲವು ವೈದ್ಯರ ಪೈಕಿ, ಕೆಲವರು ತಮ್ಮ ಕೆಲಸದಲ್ಲಿಯೂ ಖುಷಿ ಕಂಡುಕೊಳ್ಳುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಮುಂಬೈ ಮೂಲದ ವೈದ್ಯ ರಿಚಾ ನೇಗಿ.

ತೀರಾ ಹಿಂಸೆ ಎನಿಸುವ ಪಿಪಿಇ ಕಿಟ್‌ ಧರಿಸಿಯೇ 'ಸ್ಟ್ರೀಟ್ ಡ್ಯಾನ್ಸರ್ 3 ಡಿ' ಚಿತ್ರದ 'ಗಾರ್ಮಿ' ಹಾಡಿಗೆ ವೈದ್ಯರ ದಿನಾಚರಣೆ ನಿಮಿತ್ತ ನೃತ್ಯ ಮಾಡಿದ್ದರು. ವಿಡಿಯೋ ಭಾರಿ ವೈರಲ್‌ ಆಗಿ, ಸಿಕ್ಕಾಪಟ್ಟೆ ಶೇರ್​ ಆಗುವ ಮೂಲಕ ನಿಮ್ಮ ಮುಖ ದರ್ಶನ ನೀಡಿ ಎಂದು ಅನೇಕ ಕಾಮೆಂಟ್​ಗಳು ಹರಿದುಬಂದಿದ್ದವು.

ರಿಚಾ ಅವರು ವೈದ್ಯರು ಮಾತ್ರವಲ್ಲದೇ ಓರ್ವ ಒಳ್ಳೆಯ ಡ್ಯಾನ್ಸರ್​ ಎಂಬುದಕ್ಕೆ ಅವರ ಇನ್​ಸ್ಟಾಗ್ರಾಂನಲ್ಲಿರುವ ವಿಡಿಯೋಗಳೇ ಸಾಕ್ಷಿಯಾಗಿದೆ. ಇನ್ನು ಇನ್​ಸ್ಟಾಗ್ರಾಂನಲ್ಲಿ ರಿಚಾ ಅವರಿಗೆ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ವೈದ್ಯೆ ಸೇವೆಯ ಜತೆಗೆ ರಂಜಿಸುವ ಕಾಯಕವನ್ನು ಮಾಡುತ್ತಿರುವ ರಿಚಾ ಅವರಿಗೆ ಒಂದು ಸಲಾಂ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net