

Viral Post: ತಮಿಳು ನಟ ಅಜಿತ್ ಕುಮಾರ್ ಫಾರ್ಮುಲಾ 1 ದಿಗ್ಗಜ ಐರ್ಟನ್ ಸೆನ್ನಾ ಅವರ ಸ್ಮಾರಕಕ್ಕೆ ಮಂಡಿಯೂರಿ ಗೌರವ ಸಲ್ಲಿಸಿ, ಪಾದಕ್ಕೆ ಮುತ್ತಿಟ್ಟ ಭಾವನಾತ್ಮಕ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಅಜಿತ್ ರೇಸಿಂಗ್ ತಂಡದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಒಂದು ಸ್ಮಾರಕದ ಮುಂದೆ ಮಂಡಿಯೂರಿ ಗೌರವ ಸಲ್ಲಿಸಿ, ಪಾದಕ್ಕೆ ಮುತ್ತಿಡುತ್ತಾರೆ. ಈ ಸ್ಮಾರಕ ಇಮೋಲಾ ಸರ್ಕ್ಯೂಟ್ನಲ್ಲಿ ನಡೆದ ರೇಸ್ನಲ್ಲಿ ಮೃತಪಟ್ಟ, 3 ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಆದ ಬ್ರೆಜಿಲ್ನ ಐರ್ಟನ್ ಸೆನ್ನಾ ಅವರ ಸ್ಮಾರಕ. ಇಮೋಲಾ ರೇಸ್ ಟ್ರ್ಯಾಕ್ನಲ್ಲಿ ದುರಂತ ಅಪಘಾತದಲ್ಲಿ ನಿಧನರಾಗಿದ್ದರು.
ಅವರ ಗೌರವಾರ್ಥವಾಗಿ, ಆ ಸ್ಥಳದಲ್ಲಿ ಅವರ ಒಂದು ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅಭಿಮಾನಿಗಳು ಮತ್ತು ರೇಸರ್ಗಳಿಗೆ ಸ್ಮರಣಾರ್ಥ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.
ನಟ ಅಜಿತ್ ಕುಮಾರ್ ಆ ಸ್ಥಳಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಭಾವುಕರಾಗಿ ಸೆನ್ನಾ ಅವರ ಪ್ರತಿಮೆಯ ಮುಂದೆ ಮಂಡಿಯೂರಿ ಅದರ ಪಾದಗಳಿಗೆ ಮುತ್ತಿಟ್ಟರು, ಇದು ಅವರ ಆಳವಾದ ಮೆಚ್ಚುಗೆಯನ್ನು ಸೂಚಿಸುತ್ತದೆ. ಭಕ್ತಿಯಿಂದ ಅಜಿತ್ ತಮ್ಮ ರೇಸಿಂಗ್ ಹೆಲ್ಕೆಟ್ಅನ್ನು ಪ್ರತಿಮೆಯ ಕೆಳಗೆ ಇಟ್ಟು ಆಶೀರ್ವಾದವನ್ನು ಪಡೆದು ಗೌರವ ಸಲ್ಲಿಸಿದರು. (ಏಜೆನ್ಸೀಸ್)