ಈ ಮೂರು ರಾಶಿಯವರು ತಮ್ಮ ಪ್ರಾಣಕ್ಕಿಂತ ನೈತಿಕತೆಯನ್ನೇ ಹೆಚ್ಚು ಗೌರವಿಸುತ್ತಾರಂತೆ! Zodiac Signs

Zodiac Signs
Published on

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ಹಿಂದು ಧರ್ಮದಲ್ಲಿ ಜ್ಯೋತಿಷ್ಯಕ್ಕೆ ತುಂಬಾ ಮಹತ್ವವಿದೆ. ಏನೇ ಶುಭ ಕಾರ್ಯ ನಡೆಯಬೇಕೆಂದರೂ ಮೊದಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ.

ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಸ್ವಯಂ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಈ ರಾಶಿಯವರು ತಮ್ಮ ಜೀವಕ್ಕಿಂತ ಒಳ್ಳೆಯ ಗುಣಗಳಿಗೆ ಮಾತ್ರ ಬೆಲೆ ನೀಡುತ್ತಾರೆ. ಯಾರೇ ದಿಕ್ಕು ತಪ್ಪಿಸಿದರು ಕೂಡ ಅವರ ಮನಸ್ಸು ತಪ್ಪು ದಾರಿಯನ್ನು ತುಳಿಯಲು ಬಿಡುವುದೇ ಇಲ್ಲ. ಜೀವ ಇರುವವರೆಗೂ ಒಳ್ಳೆಯತನಕ್ಕೆ ಮಾತ್ರ ಈ ರಾಶಿಯವರು ಬೆಲೆ ನೀಡುತ್ತಾರೆ.

ಹಾಗಾದರೆ, ಯಾವ ರಾಶಿವರು ಅತ್ಯಂತ ಉದಾತ್ತ ಗುಣಗಳನ್ನು ಹೊಂದಿದ್ದಾರೆ. ಅವರು ತಮ್ಮ ಪ್ರಾಣಕ್ಕಿಂತ ನೈತಿಕತೆಯನ್ನೇ ಹೆಚ್ಚು ಗೌರವಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೃಷಭ ರಾಶಿ

ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯವರು ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ತಮ್ಮ ಜೀವನದಲ್ಲಿ ಸ್ಪಷ್ಟವಾಗಿ ಮತ್ತು ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಸತ್ಯವನ್ನು ಹೇಳಲು ಎಂದಿಗೂ ಹೆದರುವುದಿಲ್ಲ. ಆದರೆ, ಅವರು ಮಾನಸಿಕವಾಗಿ ಮತ್ತು ನಡವಳಿಕೆಯಲ್ಲಿ ಸ್ವಯಂ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ತಾವು ಪರಿಪೂರ್ಣರಲ್ಲ ಮತ್ತು ನಾವು ಕೂಡ ತಪ್ಪುಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನೈತಿಕತೆಯ ವಿಷಯಗಳಲ್ಲಿ ಅವರೆಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅವರು, ಅತ್ಯಂತ ಸ್ವಯಂ-ಶಿಸ್ತಿನ ಚಿಹ್ನೆಗಳಲ್ಲಿ ಒಬ್ಬರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಅವರು ಸ್ವಾಭಾವಿಕವಾಗಿ ಸಾಮಾಜಿಕವಾಗಿ ಹೊಂದಿಕೊಳ್ಳುವವರು. ಅವರು ಯಾವುದೇ ಸಂಬಂಧದಲ್ಲಿ ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಯಾವುದೇ ಪ್ರಯತ್ನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಅಭ್ಯಾಸ ಮಾಡಲು ದೃಢನಿಶ್ಚಯ ಹೊಂದಿರುತ್ತಾರೆ.

ಕನ್ಯಾ ರಾಶಿ

ಕನ್ಯಾರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಜನರು ತಾವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಮತ್ತು ಅಚ್ಚುಕಟ್ಟನ್ನು ಸ್ವಾಭಾವಿಕವಾಗಿ ನಿರೀಕ್ಷಿಸುತ್ತಾರೆ. ಅವರ ಉನ್ನತ ಮಟ್ಟದ ಸಮಗ್ರತೆ ಮತ್ತು ಸ್ವಯಂ ಶಿಸ್ತಿನ ಅರ್ಥವೇನೆಂದರೆ, ಜೀವನವು ಯಾವುದೇ ಕಷ್ಟಗಳನ್ನು ತಂದರೂ, ಅವರು ಎಂದಿಗೂ ಅನೈತಿಕವಾಗಿ ವರ್ತಿಸುವುದಿಲ್ಲ. ಇತರರು ತಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ಮೊದಲೇ, ತಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net