Alcohol : ಸುಖವಾಗಲಿ ದುಃಖವಾಗಲಿ ಜನರು ಮದ್ಯ ಸೇವಿಸುವುದು ಇಂದು ಸಾಮಾನ್ಯವಾಗಿದೆ. ಸಂಭ್ರಮಾಚರಣೆಗೂ ಎಣ್ಣೆ ಬೇಕು ಹಾಗೇ ನೋವನ್ನು ಮರೆಯಲು ಕೂಡ ಎಣ್ಣೆ ಬೇಕೇ ಬೇಕು. ಕೆಲ ಜನರು ತಮ್ಮ ಕೈಗೆ ಸಿಗುವ ಯಾವುದನ್ನಾದರೂ ಕುಡಿದರೆ, ಇನ್ನು ಕೆಲವರು ದುಬಾರಿ ಮದ್ಯಗಳನ್ನು ಮಾತ್ರ ಕುಡಿಯುತ್ತಾರೆ. ಯಾವುದಾದರೂ ಪಾರ್ಟಿ, ಸಮಾರಂಭಗಳು ಬಂದರೆ ಸಾಕು ಕೆಲವರು ಎಣ್ಣೆಯಲ್ಲೇ ಮುಳುಗಿಬಿಡುತ್ತಾರೆ. ಸರ್ಕಾರದ ಪ್ರಮುಖ ಆದಾಯವೂ ಕೂಡ ಇದೇ ಆಗಿದೆ.

ಅಂದಹಾಗೆ ಜಗತ್ತಿನಲ್ಲಿ ಅತಿ ಹೆಚ್ಚು ಕುಡುಕರು ಇರುವ ದೇಶ ಯಾವುದು ಗೊತ್ತಾ? ನಮ್ಮ ಭಾರತ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಏಕೆಂದರೆ, ಆ ದಾಖಲೆಯನ್ನು ರೊಮೇನಿಯಾ ದೇಶ ತನ್ನ ಹೆಸರಿಗೆ ಬರೆದುಕೊಂಡಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರೊಮೇನಿಯಾದ ಓರ್ವ ವ್ಯಕ್ತಿ ವರ್ಷಕ್ಕೆ ಕನಿಷ್ಠ 27.3 ಲೀಟರ್ ಆಲ್ಕೋಹಾಲ್ ಅನ್ನು ಸೇವಿಸುತ್ತಾನೆ. ನಮ್ಮ ಭಾರತದ ಜನಸಂಖ್ಯೆಯ ಸರಾಸರಿಯನ್ನು ಪರಿಗಣಿಸಿದರೆ ಅದು 16.99 ಲೀಟರ್ ಆಗಿದೆ. 19.12 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ರೊಮೇನಿಯಾದಲ್ಲಿ ಕುಡುಕರ ಪಟ್ಟಿಯಲ್ಲಿ ಪುರುಷರು ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿ ಮಹಿಳೆಯರು ಕೂಡ ಹಿಂದೆ ಬಿದ್ದಿಲ್ಲ.
ಅತಿ ಹೆಚ್ಚು ಮದ್ಯವ್ಯಸನಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ದೀರ್ಘಕಾಲದವರೆಗೆ ಮೊದಲ ಸ್ಥಾನದಲ್ಲಿದ್ದ ಜಾರ್ಜಿಯಾ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಸೋವಿಯತ್ ಗಣರಾಜ್ಯವಾದ ಜಾರ್ಜಿಯನ್ನರು ತೀವ್ರವಾದ ಚಳಿಗಾಲ ಒಳಗೊಂಡಂತೆ ಭೌಗೋಳಿಕ ವೈಶಿಷ್ಟ್ಯಗಳ ಕಾರಣದಿಂದಾಗಿ ಹೆಚ್ಚು ಮದ್ಯವನ್ನು ಸೇವಿಸುತ್ತಾರೆ. ಪ್ರತಿ ವ್ಯಕ್ತಿ ವರ್ಷಕ್ಕೆ 14.33 ಲೀಟರ್ ಮದ್ಯ ಸೇವಿಸುತ್ತಾರೆ.
ಜೆಕ್ ರಿಪಬ್ಲಿಕ್, ಲಾಟ್ವಿಯಾ ಮತ್ತು ಜರ್ಮನಿ ಮೊದಲ ಐದು ಸ್ಥಾನಗಳಲ್ಲಿವೆ. ಬಡ ದೇಶ ಉಗಾಂಡ ಆರನೇ ಸ್ಥಾನದಲ್ಲಿದೆ. ಈ ದೇಶದಲ್ಲಿ ಪ್ರತಿ ವ್ಯಕ್ತಿಯ ಆಲ್ಕೋಹಾಲ್ ಸೇವನೆಯು 12.21 ಲೀಟರ್ ಆಲ್ಕೋಹಾಲ್ ಆಗಿದೆ. ಅತ್ಯಂತ ಬಡತನದ ಕಾರಣ, ಹೆಚ್ಚಿನ ಜನರು ಕಡಿಮೆ ಬೆಲೆಯ ಮದ್ಯವನ್ನು ಸೇವಿಸುತ್ತಾರೆ. ಈ ದೇಶದ ಬಡತನಕ್ಕೆ ಮದ್ಯಪಾನವೂ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಇಲ್ಲಿ ಮದ್ಯ ಸೇವನೆಯಲ್ಲಿ ಮಹಿಳೆಯರು ಕೂಡ ಹಿಂದೆ ಬಿದ್ದಿಲ್ಲ. ಒಬ್ಬ ಮಹಿಳೆ ವರ್ಷಕ್ಕೆ 4.88 ಲೀಟರ್ ಆಲ್ಕೋಹಾಲ್ ಸೇವಿಸುತ್ತಾಳೆ. ಸಾಕಷ್ಟು ಆಹಾರವನ್ನು ಸೇವಿಸದೆ ಕೇವಲ ಮದ್ಯಪಾನ ಮಾಡುತ್ತಾರೆ.
ಇದೇ ಸಂದರ್ಭದಲ್ಲಿ ಇತ್ತೀಚಿನ ವರದಿಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿದಿನ ಗಾಂಜಾ ಬಳಸುವ ಜನರ ಸಂಖ್ಯೆಯು ಪ್ರತಿದಿನ ಮದ್ಯಪಾನ ಮಾಡುವವರ ಸಂಖ್ಯೆಗಿಂತ ಹೆಚ್ಚಾಗಿದೆ. ಔಷಧ ಬಳಕೆ ಮತ್ತು ಆರೋಗ್ಯ ಕುರಿತ ರಾಷ್ಟ್ರೀಯ ಸಮೀಕ್ಷೆ ನಾಲ್ಕು ದಶಕಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ನ ಅನೇಕ ರಾಜ್ಯಗಳಲ್ಲಿ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸಿದಾಗಿನಿಂದ ಗಾಂಜಾ ಬಳಕೆ ಹೆಚ್ಚಾಗಿದೆ. (ಏಜೆನ್ಸೀಸ್)